ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸುವ ವೇಳೆ ವರಿಷ್ಠರಿಂದ ರಾಜ್ಯ ಬಿಜೆಪಿ ನಾಯಕರ ಕಡೆಗಣನೆ: ಪ್ರಕಾಶ್ ರಾಥೋಡ್ ಟೀಕೆ
ಬೆಂಗಳೂರು: ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸುವ ವೇಳೆ ಸುದ್ದಿಗೋಷ್ಠಿಯಲ್ಲಿ ವರಿಷ್ಠರು ರಾಜ್ಯ ಬಿಜೆಪಿಯ ಯಾವುದೇ ಒಬ್ಬ ನಾಯಕರನ್ನೂ ಪಕ್ಕದಲ್ಲಿ ಕೂರಿಸಿಕೊಂಡಿಲ್ಲ ಎಂದು ವಿಧಾನಪರಿಷತ್ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಟೀಕಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ''ಕರ್ನಾಟಕದ ಬಗ್ಗೆ ಪ್ರತಿ ವಿಚಾರದಲ್ಲೂ ಬಿಜೆಪಿ ಮುಖಂಡರಿಗೆ ಇಷ್ಟೊಂದು ಅಹಂಕಾರ ಏಕೆ ಎಂದು ಪ್ರಶ್ನಿಸುವ ನಾಲಗೆ ರಾಜ್ಯ ನಾಯಕರಿಗೆ ಏಕಿಲ್ಲ? Shame shame'' ಎಂದು ಪ್ರಶ್ನೆ ಮಾಡಿದ್ದಾರೆ.
''ಚಿತ್ತಾಪುರ ಕ್ಷೇತ್ರದ ಮತದಾರರ ಆತ್ಮಗೌರವಕ್ಕೆ ಬಿಜೆಪಿಯು ಕೆಟ್ಟ ಅವಮಾನ ಮಾಡಬಾರದಿತ್ತು. ಕಳ್ಳ, ಸುಳ್ಳ, ರೌಡಿ ಯಾರಿಗೇ ಕೊಟ್ಟರು ಚಿತ್ತಾಪುರದ ಜನತೆ ಆತ್ಮಗೌರವ ಪಕ್ಕಕ್ಕಿಟ್ಟು ಬಿಜೆಪಿಗೆ ಮತ ಚಲಾಯಿಸುತ್ತಾರೆ ಎನ್ನುವ ಭ್ರಮೆಯಲ್ಲಿ ಪಕ್ಷದ ನಾಯಕರು ಇರುವಂತಿದೆ. ಚಿತ್ತಾಪುರದ ಮತದಾರರು ಈ ಅವಮಾನಕ್ಕೆ ಪಾಠ ಕಲಿಸುತ್ತಾರೆ'' ಎಂದು ಪ್ರಕಾಶ್ ರಾಥೋಡ್ ಮತ್ತೊಂದು ಟ್ವೀಟ್ ನಲ್ಲಿ ಎಚ್ಚರಿಕೆ ನೀನೀಡಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ರಾಜ್ಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸುವ ಸಂದರ್ಭದಲ್ಲಿ @BJP4Karnataka ದ ಒಬ್ಬೇ ಒಬ್ಬ ನಾಯಕರನ್ನೂ ಪಕ್ಕದಲ್ಲಿ ಕೂರಿಸಿಕೊಂಡಿಲ್ಲ.ಕರ್ನಾಟಕದ ಬಗ್ಗೆ ಪ್ರತಿ ವಿಚಾರದಲ್ಲೂ @BJP4India ದ ಮುಖಂಡರಿಗೆ ಇಷ್ಟೊಂದು ಅಹಂಕಾರ ಏಕೆ ಎಂದು ಪ್ರಶ್ನಿಸುವ ನಾಲಗೆ ರಾಜ್ಯ ನಾಯಕರಿಗೆ ಏಕಿಲ್ಲ? Shame shame pic.twitter.com/Dhr2lRZ9Rm
— Prakash Rathod (@PRathod_INC) April 12, 2023