Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಮಹಾರಾಷ್ಟ್ರಕ್ಕೆ ಇದು 'ಭೂಷಣ'ವೆ?

ಮಹಾರಾಷ್ಟ್ರಕ್ಕೆ ಇದು 'ಭೂಷಣ'ವೆ?

20 April 2023 12:09 AM IST
share
ಮಹಾರಾಷ್ಟ್ರಕ್ಕೆ ಇದು ಭೂಷಣವೆ?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

ಎರಡು ತಿಂಗಳ ಹಿಂದೆ ಆಂಧ್ರಪ್ರದೇಶದಲ್ಲಿ ಟಿಡಿಪಿ ಹಮ್ಮಿಕೊಂಡ ರ್ಯಾಲಿಯೊಂದರಲ್ಲಿ ಭಾರೀ ಕಾಲ್ತುಳಿತ ಸಂಭವಿಸಿ ಸುಮಾರು 8 ಮಂದಿ ಮೃತರಾಗಿದ್ದರು. ಎರಡು ಪ್ರತ್ಯೇಕ ಸಭೆಗಳಲ್ಲಿ ಈ ಕಾಲ್ತುಳಿತ ಸಂಭವಿಸಿದ್ದು, ಇದನ್ನು ಗಂಭೀರವಾಗಿ ತೆಗೆದುಕೊಂಡ ಆಡಳಿತ ಸಾರ್ವಜನಿಕ ರ್ಯಾಲಿ, ಸಮಾವೇಶಗಳನ್ನೇ ನಿಷೇಧಿಸಿತು. ಅಷ್ಟೇ ಅಲ್ಲ, ಹೈಕೋರ್ಟ್‌ನ ನ್ಯಾಯಮೂರ್ತಿ ಶೇಷಶಯನ ರೆಡ್ಡಿ ನೇತೃತ್ವದ ಏಕ ವ್ಯಕ್ತಿ ಆಯೋಗವು ಇದರ ತನಿಖೆಯನ್ನು ಕೈಗೆತ್ತಿಕೊಂಡಿತು. ರಾಜಕೀಯ ಸಮಾವೇಶದಲ್ಲಿ ನಡೆದ ಸರಣಿ ಕಾಲ್ತುಳಿತ ಮಾಧ್ಯಮಗಳ ಮುಖಪುಟ ಸುದ್ದಿಯಾದವು. ಇದೀಗ ಇಂತಹದೇ ಒಂದು ದೊಡ್ಡ ದುರಂತ ಮಹಾರಾಷ್ಟ್ರದಲ್ಲಿ ನಡೆದ ಸಮಾವೇಶವೊಂದರಲ್ಲಿ ಸಂಭವಿಸಿದೆ. ಇಲ್ಲಿ ನಡೆದಿರುವುದು ಕಾಲ್ತುಳಿತವಲ್ಲ ಎನ್ನುವ ಕಾರಣಕ್ಕಾಗಿ ಯಾವ ಮಾಧ್ಯಮಗಳಲ್ಲೂ ಅದು ಮುಖ ಪುಟ ಸುದ್ದಿಯಾಗಲಿಲ್ಲ. ಆದರೆ ಯಾವುದೇ ಕಾಲ್ತುಳಿತಕ್ಕಿಂತ ಭೀಕರವಾಗಿರುವ ದುರಂತ ಇದಾಗಿತ್ತು. ಇದರಲ್ಲಿ ಸುಮಾರು 14 ಜನರು ಮೃತಪಟ್ಟಿದ್ದರೆ, 50ಕ್ಕೂ ಅಧಿಕ ಮಂದಿ ಗಂಭೀರ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಮಹಾರಾಷ್ಟ್ರದ ಸಾಮಾಜಿಕ ಸುಧಾರಕ ಎಂದು ಖ್ಯಾತಿ ಪಡೆದಿರುವ, ಧಾರ್ಮಿಕ ವಲಯದಲ್ಲಿ ಅಪಾರ ಹಿಂಬಾಲಕರನ್ನು ಹೊಂದಿರುವ ದತ್ತಾತ್ರೇಯ ನಾರಾಯಣ ಅಲಿಯಾಸ್ ಅಪ್ಪಾ ಸಾಹೇಬ್ ಅವರಿಗೆ ಅಲ್ಲಿನ ಸರಕಾರ ಪ್ರತಿಷ್ಠಿತ 'ಮಹಾರಾಷ್ಟ್ರ ಭೂಷಣ' ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ತನ್ನದೇ ಪ್ರತಿಷ್ಠಾನವನ್ನೂ ಹೊಂದಿರುವ ಅಪ್ಪಾ ಸಾಹೇಬ್ ಅವರು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಜನಮನಗಳಲ್ಲಿ ಗುರುತಿಸಿಕೊಂಡಿದ್ದಾರೆ ಮಾತ್ರವಲ್ಲ, ಅಧ್ಯಾತ್ಮ ವಲಯದಲ್ಲೂ ತಮ್ಮದೇ ಸ್ಥಾನವನ್ನು ಹೊಂದಿದ್ದಾರೆ. ಅವರ ಸೇವೆಯನ್ನು ಗೌರವಿಸುವುದಷ್ಟೇ ಸರಕಾರದ ಗುರಿಯಾಗಿದ್ದಿದ್ದರೆ, ರಾಜಭವನದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸುವುದರೊಂದಿಗೆ ಎಲ್ಲವೂ ಮುಗಿದು ಬಿಡುತ್ತಿತ್ತು. ಆದರೆ ಅವರ ಹಿಂದಿರುವ ಲಕ್ಷಾಂತರ ಹಿಂಬಾಲಕರನ್ನು ತನ್ನವರಾಗಿಸಿಕೊಳ್ಳುವ ಉದ್ದೇಶ ಸರಕಾರಕ್ಕಿದ್ದುದರಿಂದ, ಪ್ರಶಸ್ತಿ ಪ್ರದಾನ ಸಮಾರಂಭವನ್ನು ರಾಜಕೀಯ ಸಮಾರಂಭವಾಗಿ ಪರಿವರ್ತಿಸಿತು. ಮುಖ್ಯವಾಗಿ ಗೃಹ ಸಚಿವ ಅಮಿತ್ ಶಾ ಅವರು ಈ ಸನ್ಮಾನವನ್ನು ನೆರವೇರಿಸುವವರಿದ್ದರು. ಕಾರ್ಯಕ್ರಮವನ್ನು ಅಮಿತ್ ಶಾ ಅವರ ಅಗತ್ಯಕ್ಕನುಗುಣವಾಗಿ ರೂಪಿಸಲಾಯಿತು. ದೂರದೂರದಿಂದ ಲಕ್ಷಾಂತರ ಜನರನ್ನು ಸೇರಿಸಲಾಯಿತು. ವಿಪರ್ಯಾಸವೆಂದರೆ, ಅದು ಬಿರುಬಿಸಿಲಿನ ಮಧ್ಯಾಹ್ನದ ಸಮಯ. ರಾಜಕೀಯ ನಾಯಕರ ಆಗಮನಕ್ಕಾಗಿ ಕಾಯುತ್ತಾ ಜನರು ತೀವ್ರವಾಗಿ ಕಂಗೆಟ್ಟರು. ಬಿಸಿಲು, ಬಾಯಾರಿಕೆ, ಶೌಚದ ಸಮಸ್ಯೆ ಮೊದಲಾದ ಕಾರಣಗಳಿಂದ ನೂರಾರು ಜನರು ಅಸ್ವಸ್ಥರಾದರು. ಹಲವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಅವರಲ್ಲಿ ಸುಮಾರು 14 ಜನರು ಆಸ್ಪತ್ರೆಗಳಲ್ಲಿ ಮೃತಪಟ್ಟರು. ಮರುದಿನ ಪತ್ರಿಕೆಗಳಲ್ಲಿ ಸಮಾರಂಭದ ವಿವರ ವರದಿಯಾದವೇ ಹೊರತು, ಈ ದುರಂತ ಯಾರ ಅರಿವಿಗೂ ಬರಲಿಲ್ಲ.

ರಾಜಕಾರಣಿಗಳು ಆಸ್ಪತ್ರೆಗೆ ಭೇಟಿ ನೀಡಿ, ಸಂತ್ರಸ್ತರನ್ನು ಸಂತೈಸಿ ತಮ್ಮ ಹೊಣೆಗಾರಿಕೆಗಳಿಂದ ಜಾರಿಕೊಂಡರು. ಆದರೆ, ಇದನ್ನೊಂದು ದುರಂತವಾಗಿ ಗುರುತಿಸುವ ಪ್ರಯತ್ನ ನಡೆಯಲಿಲ್ಲ. 'ಬಿಸಿಲ ಬೇಗೆಗೆ ಬಲಿ' ಎಂದೇ ಎಲ್ಲರೂ ಘಟನೆಯನ್ನು ವ್ಯಾಖ್ಯಾನಿಸಿದರು. ಸಾಧಾರಣವಾಗಿ ಬೇಸಿಗೆ ಕಾಲದಲ್ಲಿ ಬಿಸಿಲಿನ ಧಗೆಗೆ ದೇಶಾದ್ಯಂತ ಜನರು ಅಸ್ವಸ್ಥರಾಗುತ್ತಿರುತ್ತಾರೆ. ಆಸ್ಪತ್ರೆ ಪಾಲಾಗುತ್ತಾರೆ. ನಿರ್ಜಲೀಕರಣದಿಂದಾಗಿ ಸಾವುಗಳೂ ಸಂಭವಿಸುತ್ತವೆ. ಇದಕ್ಕಾಗಿ ಯಾರನ್ನೂ ನೇರವಾಗಿ ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗುವುದಿಲ್ಲ. ಆದರೆ ಇಲ್ಲಿ ಸಮಾವೇಶದ ಹೆಸರಿನಲ್ಲಿ ಜನರನ್ನು ಧಗಿಸುವ ಬಿಸಿಲಲ್ಲಿ ಕುಳ್ಳಿರಿಸಿ, ಅವರಿಗೆ ಕುಡಿಯುವ ನೀರಿನ ವ್ಯವಸ್ಥೆಯೂ ಮಾಡದೆ ಇದ್ದುದರಿಂದ ದುರಂತ ಸಂಭವಿಸಿತು. ವೇದಿಕೆಯಲ್ಲಿದ್ದ ಅಷ್ಟೂ ಜನರಿಗೆ ಸರ್ವ ವ್ಯವಸ್ಥೆಯನ್ನೂ ಮಾಡಿಕೊಡಲಾಗಿತ್ತು. ಆದುದರಿಂದ ಅವರಾರಿಗೂ ಬಿಸಿಲ ಬೇಗೆ ತಾಕಿರಲಿಲ್ಲ. ನೆರೆದ ಜನರಿಗೆ ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರೂ ದುರಂತ ಸಂಭವಿಸುತ್ತಿರಲಿಲ್ಲ ಎಂದು ಹೇಳಲಾಗುತ್ತಿದೆ. ಅಂದರೆ, ವ್ಯವಸ್ಥಾಪಕರ ಬೇಜವಾಬ್ದಾರಿಯೇ ಅನಾಹುತಕ್ಕೆ ಕಾರಣವಾಗಿದೆ. ಆದುದರಿಂದ, ಅಲ್ಲಿ ನಡೆದ ದುರಂತಕ್ಕೆ ಪ್ರಕೃತಿಯನ್ನು ಅಥವಾ ಬಿಸಿಲ ಬೇಗೆಯನ್ನು ಹೊಣೆ ಮಾಡಿ ರಾಜಕಾರಣಿಗಳು ನುಣುಚಿಕೊಳ್ಳುವಂತಿಲ್ಲ. ಈ ಸಭೆಯಲ್ಲಿ ಆಕಸ್ಮಿಕವಾಗಿ ಕಾಲ್ತುಳಿತ ಸಂಭವಿಸಿದ್ದರೆ ಅದು ದೇಶಾದ್ಯಂತ ಸುದ್ದಿಯಾಗಿ ಬಿಡುತ್ತಿತ್ತು. ಸ್ವತಃ ಪ್ರಧಾನಿಯೇ ಅದರ ಬಗ್ಗೆ ಹೇಳಿಕೆಯನ್ನು ನೀಡಬೇಕಾದ ಸ್ಥಿತಿ ನಿರ್ಮಾಣವಾಗಿ ಬಿಡುತ್ತಿತ್ತು. ಆದರೆ ಇದು ಕಾಲ್ತುಳಿತಕ್ಕಿಂತಲೂ ಭೀಕರವಾದುದು. ರಾಜಕಾರಣಿಗಳು ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಜನರನ್ನು ಎಲ್ಲೆಲ್ಲಿಂದಲೋ ವಾಹನಗಳಲ್ಲಿ ತುಂಬಿಸಿ ತಂದು ಅವರಿಗೆ ನೀರನ್ನೂ ನೀಡದೆ ಸಾಯುವ ಸ್ಥಿತಿಗೆ ತಳ್ಳುವುದು ಯಾವ ನ್ಯಾಯ?

ಕಾಲ್ತುಳಿತವಾಗಿ ಜನರು ಸತ್ತಿದ್ದರೆ ಸರಕಾರ ತಕ್ಷಣ ಪರಿಹಾರ ಘೋಷಿಸ ಬೇಕಾಗುತ್ತಿತ್ತು. ಆದರೆ, ಈ ದುರಂತದಲ್ಲಿ ಬಲಿಯಾದ ಸಂತ್ರಸ್ತ ಕುಟುಂಬಕ್ಕೆ ಸರಕಾರ ಯಾವುದೇ ಪರಿಹಾರವನ್ನು ಈವರೆಗೆ ಘೋಷಿಸಿಲ್ಲ. ಈ ಸಾವು ನೋವುಗಳು ಹೇಗೆ ಸಂಭವಿಸಿತು ಎನ್ನುವುದನ್ನು ತನಿಖೆ ಮಾಡಲು ಈವರೆಗೆ ಯಾವುದೇ ತಂಡವನ್ನೂ ರಚನೆ ಮಾಡಿಲ್ಲ. ಈ ಮೂಲಕ, ದುರಂತದ ಹೊಣೆಗಾರಿಕೆಯಿಂದ ಅಲ್ಲಿಯ ಸರಕಾರ ಸಂಪೂರ್ಣ ನುಣುಚಿಕೊಂಡಿದೆ. ಸರಕಾರದ ಈ ಕೃತ್ಯದ ವಿರುದ್ಧ ದೊಡ್ಡ ಪ್ರಮಾಣದ ಚರ್ಚೆಯೂ ನಡೆಯದೇ ಇರುವುದು ವಿಪರ್ಯಾಸವಾಗಿದೆ. ಸಮಾರಂಭದ ಕೇಂದ್ರ ಬಿಂದು ಗೃಹ ಸಚಿವ ಅಮಿತ್ ಶಾ ಅವರೇ ಆಗಿರುವುದರಿಂದ, ಈ ಪ್ರಕರಣವನ್ನು ಸಂಪೂರ್ಣ ಮುಚ್ಚಿ ಹಾಕಲಾಗಿದೆ ಎಂದು ಜನರು ಆರೋಪಿಸುತ್ತಿದ್ದಾರೆ.

ಈ ಹಿಂದೆ ಕೊರೋನ ದೇಶವನ್ನು ಕಂಗೆಡಿಸಿದ ಕಾಲದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಲಕ್ಷಾಂತರ ಜನರನ್ನು ಸೇರಿಸಿ ಪ್ರಧಾನಿ ಮೋದಿಯವರೇ ಭಾಷಣ ಮಾಡಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. ಈ ಸಮಾವೇಶಗಳ ಬಳಿಕ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಕೊರೋನ ವ್ಯಾಪಿಸಿತು. ರಾಜಕಾರಣಿಗಳ ತಪ್ಪಿಗೆ ಜನರು ಲಾಕ್‌ಡೌನ್ ಶಿಕ್ಷೆಯನ್ನು ಅನುಭವಿಸಬೇಕಾಯಿತು. ಕೊರೋನ ದೇಶವನ್ನು ಕಂಗೆಡಿಸುತ್ತಿದ್ದ ಹೊತ್ತಿನಲ್ಲೇ ರಾಜಕಾರಣಿಗಳು ತಮ್ಮ ರಾಜಕೀಯ ದುರುದ್ದೇಶಕ್ಕಾಗಿ ಕುಂಭ ಮೇಳದಲ್ಲಿ ಲಕ್ಷಾಂತರ ಜನರಿಗೆ ಭಾಗವಹಿಸಲು ಅವಕಾಶ ಮಾಡಿ ಕೊಟ್ಟರು. ಅದರ ಪರಿಣಾಮವನ್ನೂ ದೇಶದ ಜನರು ಅನುಭವಿಸಿದರು. ಇದೀಗ ಸುಡುವ ಬಿಸಿಲಿಗೆ ಜನರನ್ನು ಸೇರಿಸಿ ಹಾಡಹಗಲೇ ಅವರನ್ನು ಕೊಂದು ಹಾಕಲಾಗಿದೆ. ಈ ದುರಂತಕ್ಕೆ ಸಂಬಂಧಿಸಿ ಸರಕಾರ ಸಣ್ಣದೊಂದು ವಿಷಾದವನ್ನೂ ವ್ಯಕ್ತಪಡಿಸಿಲ್ಲ. ಎ.16ರಂದು ನಡೆದ ಅಂದಿನ ದುರಂತದ ಬಗ್ಗೆ ಸ್ಥೂಲ ತನಿಖೆಯೊಂದು ನಡೆಯಲೇ ಬೇಕಾಗಿದೆ. ಅಷ್ಟೊಂದು ಜನರನ್ನು ಯಾರು ಸೇರಿಸಿದರು? ಅದರ ವ್ಯವಸ್ಥಾಪಕರು ಯಾರು? ಅಲ್ಲಿನ ಅವ್ಯವಸ್ಥೆಗೆ ಯಾರು ಕಾರಣ? ಒಟ್ಟು ಎಷ್ಟು ಜನರು ಮೃತಪಟ್ಟಿದ್ದಾರೆ? ಎಷ್ಟು ಮಂದಿ ಅಸ್ವಸ್ಥರಾಗಿದ್ದಾರೆ? ಈ ಎಲ್ಲ ವಿವರಗಳು ಬಹಿರಂಗವಾಗಬೇಕಾಗಿದೆ. ಅಮಾಯಕ ಜನರನ್ನು ರಾಜಕಾರಣಿಗಳ ಹಿತಾಸಕ್ತಿಗೆ ಬಲಿಕೊಟ್ಟ ಜನರಿಗೆ ಶಿಕ್ಷೆಯಾಗಬೇಕಾಗಿದೆ. ಒಬ್ಬ ಸಾಮಾಜಿಕ, ಆಧ್ಯಾತ್ಮಿಕ ನೇತಾರನಿಗೆ 'ಮಹಾರಾಷ್ಟ್ರ ಭೂಷಣ' ಪ್ರಶಸ್ತಿ ಪ್ರದಾನ ಮಾಡುವ ಸಮಾರಂಭದ ಹೆಸರಿನಲ್ಲಿ ಅಮಾಯಕರನ್ನು ಸಾಯಿಸುವುದು ಮಹಾರಾಷ್ಟ್ರಕ್ಕೆ ಯಾವ ರೀತಿ ಭೂಷಣವಾಗುತ್ತದೆ? ಸರಕಾರ ಉತ್ತರಿಸಬೇಕು.

share
Next Story
X