ಪಡುಬಿದ್ರಿ: ಇಲ್ಲಿನ ಬೇಂಗ್ರೆ ನಿವಾಸಿ ಸುಲೈಮಾನ್ (75) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ನಿಧನರಾದರು. ಸುಮಾರು 45 ವರ್ಷಗಳಿಂದಲೂ ಕಾರು ಚಾಲಕರಾಗಿದ್ದ ಇವರು ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಎಸೋಸಿಯೇಶನ್ ಪಡುಬಿದ್ರಿ ಘಟಕದ ಮಾಜಿ ಕೋಶಾಧಿಕಾರಿಯಾಗಿದ್ದರು. ಮೂವರು ಪುತ್ರಿಯರು ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.