ಸೆಯ್ಯಿದ್ ಮದನಿ ಶರೀಯತ್ ಕಾಲೇಜ್ ಮತ್ತು ಕಾಲೇಜ್ ಆಫ್ ಇಸ್ಲಾಮಿಕ್ ಸೈನ್ಸ್ ಪುನರಾರಂಭ
ಉಳ್ಳಾಲ: ಇಸ್ಲಾಂ ಧರ್ಮ ಮತ್ತು ಶಿಕ್ಷಣ ಪ್ರವಾದಿಯವರ ಕಾಲದಿಂದ ಬೆಳೆದು ಬಂದಿದೆ. ಈ ಶಿಕ್ಷಣ ಉಳ್ಳಾಲದಲ್ಲೂ ಕೂಡಾ ಬೆಳೆಯಬೇಕು. ತಾಜುಲ್ ಉಲಮಾ ಉಳ್ಳಾಲ ದಲ್ಲಿ ಕಾಲೇಜು ಆರಂಭಿಸಿದ್ದಾರೆ. ಬಹಳಷ್ಟು ಮಂದಿ ಇಲ್ಲಿ ಶಿಕ್ಷಣ ಪಡೆದು ಹೋಗಿದ್ದಾರೆ. ಈಗ ಕಾಲೇಜು ಪುನರಾರಂಭ ಆಗಿದ್ದು, ಈ ಕಾಲೇಜಿನಲ್ಲಿ ಶಿಕ್ಷಣ ಪಡೆಯುವವರು ಗೌರವದಿಂದ ವಿದ್ಯಾರ್ಜನೆ ಮಾಡುವ ಜೊತೆ ಗುರುಗಳನ್ನು ಗೌರವದಿಂದ ಕಾಣಬೇಕು. ಪಡೆದ ಶಿಕ್ಷಣ ವನ್ನು ಜೀವನದಲ್ಲಿ ಅಳವಡಿಸಿಕೊಂಡು ಬರಬೇಕು ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನ್ ಉಲೆಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಕರೆ ನೀಡಿದರು.
ಅವರು ಉಳ್ಳಾಲ ಜುಮ್ಮಾ ಮಸೀದಿ ಮತ್ತು ಸೆಯ್ಯಿದ್ ಮದನಿ ದರ್ಗಾ ಸಮಿತಿ ಉಳ್ಳಾಲ ಇದರ ಆಶ್ರಯದಲ್ಲಿ ಉಳ್ಳಾಲ ದರ್ಗಾ ವಠಾರದಲ್ಲಿ ನಡೆದ ಸೆಯ್ಯಿದ್ ಮದನಿ ಶರೀಯತ್ ಕಾಲೇಜ್ ಮತ್ತು ಸಯ್ಯಿದ್ ಮದನಿ ಕಾಲೇಜ್ ಆಫ್ ಇಸ್ಲಾಮಿಕ್ ಸೈನ್ಸ್ ಪುನರಾರಂಭ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸೆಯ್ಯದ್ ಆಟಕೋಯ ತಂಙಳ್ ಕುಂಬೋಳ್ ರವರು, ಸೆಯ್ಯಿದ್ ಮದನಿ ಕಾಲೇಜ್ ತಾಜುಲ್ ಉಲಮಾರವರ ನೇತೃತ್ವದಲ್ಲಿ ನಡೆಯುತ್ತಿತ್ತು. ಆದರೆ ಬೆಳವಣಿಗೆಯಲ್ಲಿ ಹಿನ್ನಡೆಯಾಗಿತ್ತು. ಇದೀಗ ಈ ಕಾಲೇಜು ಪುನರಾರಂಭ ಆಗಿದೆ, ಇದನ್ನು ಯಶಸ್ವಿಯಾಗಿ ನಿರ್ವಹಿಸಬೇಕು ಎಂದು ಹೇಳಿದರು.
ಸಮಸ್ತ ಅಧ್ಯಕ್ಷ ರಈಸುಲ್ ಉಲಮಾ ಸುಲೈಮಾನ್ ಉಸ್ತಾದ್ ಮಾತನಾಡಿ, ಶರೀಯತ್ ಕಾಲೇಜ್ ಬೆಳವಣಿಗೆ ಆಗಬೇಕು. ನಿರಂತರವಾಗಿ ಕಾರ್ಯಾಚರಿಸಬೇಕು ಎಂದು ಕರೆ ನೀಡಿದರು.
ಡಾ. ಹುಸೈನ್ ಸಖಾಫಿ ಚುಳ್ಳಿಕೋಡ್ ಮಾತನಾಡಿ, ಬಹಳಷ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದ ಕಾಲೇಜು ಉಳಿಸುವ ಜವಾಬ್ದಾರಿ ನಮ್ಮದು. ಕೆಲವು ಕಾರಣ ನೀಡಿ ಮುಚ್ಚಿಡುವ ಬದಲು ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ದೃಷ್ಟಿಯಿಂದ ನಿರಂತರ ಕಾರ್ಯಾಚರಿಸಿದರೆ ಈ ಕಾಲೇಜು ಉನ್ನತ ಹಂತಕ್ಕೆ ತಲುಪಬಹುದು. ಈಗ ಕಾಲೇಜು ಗೆ ಮರು ಚಾಲನೆ ಆಗಿದೆ, ಅದು ಯಶಸ್ವಿ ಆಗಿ ಕಾರ್ಯ ನಿರ್ವಹಿಸಲಿ ಎಂದು ಹಾರೈಸಿದರು.
ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ದುಆ ನೆರವೇರಿಸಿದರು.
ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಖಾಝಿ ಫಝಲ್ ಕೋಯಮ್ಮ ತಂಙಳ್ ದುಆ ದಿಂದ ಮತ್ತೆ ಕಾಲೇಜು ಪುನರಾರಂಭ ಆಗುತ್ತಿದೆ. ದರ್ಸ್ ತಾಜುಲ್ ಉಲಮಾ ಅವರು ಆರಂಭಿಸಿದ್ದರು, ಆ ವೇಳೆ ಎಲ್ಲರ ಸಹಕಾರ ದಿಂದ ಬೆಳೆದಿತ್ತು. ಈಗ ಮತ್ತೆ ಧಾರ್ಮಿಕ ಶಿಕ್ಷಣ ಕ್ಕೆ ಹೆಚ್ಚು ಒತ್ತು ನೀಡಿ ಕಾಲೇಜು ಆರಂಭ ಮಾಡಲಾಗಿದೆ. ಯೆನೆಪೋಯರವರ ಸಹಕಾರದಿಂದ ದರ್ಗಾ ಅಧ್ಯಕ್ಷ ಕಾನೂನು ಕಾಲೇಜು ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ.ಅಬ್ದುಲ್ ಕುಂಞಿ ಎನೇಪೋಯ , ವಕ್ಫ್ ಬೋರ್ಡ್ ರಾಜ್ಯಾಧ್ಯಕ್ಷ ಶಾಫಿ ಸಅದಿ ಬೆಂಗಳೂರು, ರವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರಈಸುಲ್ ಉಲಮಾ ಇ ಸುಲೈಮಾನ್ ಉಸ್ತಾದ್, ಸೆಯ್ಯದ್ ಅತ್ತಾವುಲ್ಲ ತಂಙಳ್ ಉದ್ಯಾವರ,
ಸೆಯ್ಯದ್ ಆಟಕೋಯ ತಂಙಳ್ ಕುಂಬೋಳ್, ಡಾ.ಹುಸೈನ್ ಸಖಾಫಿ ಚುಳ್ಳಿಕೋಡ್, ಡಾ.ಅಬ್ದುಲ್ ಹಕೀಂ ಅಝ್ ಅರಿ , ಪೇರೋಡ್ ಅಬ್ದುಲ್ ರಹಿಮಾನ್ ಸಖಾಫಿ, ಶಾಫಿ ಸಅದಿ ಬೆಂಗಳೂರು, ಸಯ್ಯಿದ್ ಮದನಿ ಅರಬಿಕ್ ಕಾಲೇಜು ಪ್ರಾಂಶುಪಾಲರಾದ ಮುಹಮ್ಮದ್ ಕುಟ್ಟಿ ಸಖಾಫಿ ನೆಲ್ಲಿಕುನ್ನು, ಸೆಯ್ಯಿದ್ ಇಂಬಿಚಿಕೋಯ ತಂಙಳ್, ಅಬ್ದುಲ್ ರಹಿಮಾನ್ ಮದನಿ ಮೂಳೂರು, ವಾಲೆಮೊಂಡೋವು ಉಸ್ತಾದ್, ಹುಸೈನ್ ಸ ಅದಿ ಕೆಸಿರೋಡ್ , ಡಾ.ಅಬ್ದುಲ್ಲ ಕುಂಞಿ ಯೆನೆಪೋಯ,
ವಕ್ಫ್ ಬೋರ್ಡ್ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಮುಹಮ್ಮದ್ ಮದನಿ, ಹಾಫೀಳ್ ಸಅದಿ, ಅಬ್ದುಲ್ ರಶೀದ್ ಝೈನಿ, ಅಬ್ದುಲ್ ಖಾದರ್ ಮದನಿ ಪಲ್ಲಂಗೋಡು, ಅಬ್ದುಲ್ ಲತೀಫ್ ಸಖಾಫಿ ಮದನೀಯಂ, ಮೊಯ್ಯದ್ದೀನ್ ಸಖಾಫಿ ತೋಕೆ, ಅಬ್ದುಲ್ ಖಾದರ್ ಸಖಾಫಿ ಅಲ್ ಮದೀನಾ,ಅಬುಸುಫಿಯಾನ್ ಇಬ್ರಾಹಿಂ ಮದನಿ, ಜಿ.ಎಂ.ಕಾಮಿಲ್ ಸಖಾಫಿ, ಅಹ್ಮದ್ ಬಾಖವಿ, ಎಸ್ ಎಂ ರಶೀದ್ ಹಾಜಿ, ಕೆ.ಎಂ ಸಿದ್ದೀಕ್ ಮೋಂಟುಗೋಳಿ , ಎಸ್.ಕೆ.ಖಾದರ್ ಹಾಜಿ, ಹೈದರ್ ಪರ್ತಿಪ್ಪಾಡಿ, ಇಬ್ರಾಹಿಂ ಅಹ್ಸನಿ, ದರ್ಗಾ ಮಾಜಿ ಅಧ್ಯಕ್ಷ ಯು.ಎಸ್. ಹಂಝ, ಉಳ್ಳಾಲ ದರ್ಗಾ
ಉಪಾಧ್ಯಕ್ಷ ಯು.ಎಮ್ ಅಶ್ರಫ್ ಅಹ್ಮದ್ ರೈಟ್ ವೇ, ಹಸೈನಾರ್ ಕೋಟೆಪುರ, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಶಿಹಾಬುದ್ದೀನ್ ಸಖಾಫಿ,ಜೊತೆ ಕಾರ್ಯದರ್ಶಿ ಇಸಾಕ್ ಮೇಲಂಗಡಿ, ಮುಸ್ತಫಾ ಮದನಿ ನಗರ, ಕೋಶಾಧಿಕಾರಿ ನಾಝಿಮ್ ರಹ್ಮಾನ್ ಮುಕಚೇರಿ, ಲೆಕ್ಕ ಪರಿಶೋಧಕ ಫಾರೂಕ್ ಯು.ಎಚ್. ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಉಪಾಧ್ಯಕ್ಷ ಯು.ಎಮ್ ಅಶ್ರಫ್ ಅಹ್ಮದ್ ರೈಟ್ ವೇ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಶಿಹಾಬುದ್ದೀನ್ ಸಖಾಫಿ, ವಂದಿಸಿದರು.