ಭಟ್ಕಳ: ಮತದಾನದ ಜಾಗೃತಿಗಾತಿ “ನಮ್ಮ ನಡೆ ಮತಗಟ್ಟೆಯ ಕಡೆ” ಕಾರ್ಯಕ್ರಮ
ಭಟ್ಕಳ: ತಾಲೂಕಿನ ಮಾವಳ್ಳಿ-1, ಮಾವಳ್ಳಿ-2 (ಮುರ್ಡೇಶ್ವರ) ಗ್ರಾಮ ಪಂ. ಸ.ಹಿ.ಪ್ರಾ.ಶಾಲೆ, ಕೆರೆಕಟ್ಟೆ, ಮುರ್ಡೇಶ್ವರ ಆವರಣದಲ್ಲಿ ತಾಲೂಕ ಮಟ್ಟದ ಸ್ವೀಪ್ ಕಾರ್ಯಕ್ರಮದಡಿ ವಿನೂತನವಾಗಿ “ನಮ್ಮ ನಡೆ ಮತಗಟ್ಟೆಯ ಕಡೆ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
79- ಭಟ್ಕಳ ವಿಧಾನ ಸಭಾ ಕ್ಷೇತ್ರ ಚುನಾವಣಾಧಿಕಾರಿಗಳು ಹಾಗೂ ಭಟ್ಕಳ ಉಪ-ವಿಭಾಗದ ಸಹಾಯಕ ಆಯುಕ್ತರಾದ ಮಮತಾದೇವಿ ಜಿ.ಎಸ್. ಧ್ವಜಾರೋಹಣ ನಡೆಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮತದಾನದ ಕುರಿತು ಅರಿವು ಮೂಡಿಸುವ ಧ್ಯೇಯ ಗೀತೆಯನ್ನು ಪ್ರಸಾರ ಮಾಡುವ ಮೂಲಕ Rally ಕೈಗೊಂಡು ಮತದಾನದ ಕುರಿತು ಘೋಷಣೆ ಕೂಗಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಈ ಸಂದರ್ಭ ತಾಲೂಕು ಪಂ. ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲೂಕು ಸ್ವೀಪ್ ನೋಡಲ್ ಅಧಿಕಾರಿ ಪ್ರಭಾಕರ ಎಸ್., ತಹಸೀಲ್ದಾರ ತಿಪ್ಪೇಸ್ವಾಮಿ, ತಾ.ಪಂ. ಸಹಾಯಕ ನಿರ್ದೇಶಕ(ಗ್ರಾಮೀಣ ಉದ್ಯೋಗ) ನಾಗರಾಜ ನಾಯ್ಕ, ಮಾವಳ್ಳಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕುಮಾರ ಮೊಗೇರ, ಕಾರ್ಯದರ್ಶಿ ಮಾರುತಿ ದೇವಾಡಿಗ, ಗ್ರಾ.ಪಂ. ಸಿಬ್ಬಂದಿ, NRLM ತಾಲೂಕು ಸಂಯೋಜಕ ಗೋಪಾಲ ನಾಯ್ಕ ಹಾಗೂ ವೆಂಕಟೇಶ ದೇವಾಡಿಗ, ಶಿಕ್ಷಣ ಸಂಯೋಜಕರು, CRB, ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ವ-ಸಹಾಯ ಸಂಘದ ಸದಸ್ಯರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.