ಪುಟಿನ್ ಮೇಲೆ ನಾವು ದಾಳಿ ನಡೆಸಿಲ್ಲ: ಝೆಲೆನ್ಸ್ಕಿ
ಹೆಲ್ಸಿಂಕಿ (ಫಿನ್ಲ್ಯಾಂಡ್), ಮೇ 4: ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ರನ್ನು ಕೊಲ್ಲಲು ಉಕ್ರೇನ್ ಪ್ರಯತ್ನ ನಡೆಸಿದೆ ಎಂಬ ಆರೋಪವನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಬುಧವಾರ ನಿರಾಕರಿಸಿದ್ದಾರೆ.
ಕ್ರೆಮ್ಲಿನ್ನ ಆಕಾಶದಲ್ಲಿ ಎರಡು ಡ್ರೋನ್ಗಳನ್ನು ಹೊಡೆದುರುಳಿಸಲಾಗಿದೆ ಎಂದು ರಶ್ಯ ಹೇಳಿದ ಬಳಿಕ ಝೆಲೆನ್ಸ್ಕಿ ಈ ಹೇಳಿಕೆ ನೀಡಿದ್ದಾರೆ.
“ನಾವು ಪುಟಿನ್ ಮೇಲೆ ದಾಳಿ ಮಾಡಿಲ್ಲ. ನಾವು ನಮ್ಮ ಭೂಭಾಗದಲ್ಲಿ ಮಾತ್ರ ಹೋರಾಟ ಮಾಡುತ್ತೇವಬೆ. ನಾನು ನಮ್ಮ ಗ್ರಾಮಗಳು ಮತ್ತು ನಗರಗಳನ್ನು ರಕ್ಷಿಸುತ್ತಿದ್ದೇವೆ’’ ಎಂದು ಹೆಲ್ಸಿಂಕಿಯಲ್ಲಿ ನೋರ್ಡಿಕ್ ವಲಯದ ನಾಯಕರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಝೆಲೆನ್ಸ್ಕಿ ಹೇಳಿದರು.
“ನಾವು ಪುಟಿನ್ ಮೇಲೆಯಾಗಲಿ, ಮಾಸ್ಕೋ ಮೇಲೆಯಾಗಲಿ ದಾಳಿ ಮಾಡುವುದಿಲ್ಲ. ಇದಕ್ಕೆ ಬೇಕಾಗುವಷ್ಟು ಶಸ್ತ್ರಗಳು ನಮ್ಮಲ್ಲಿ ಇಲ್ಲ’’ ಎಂದರು.
Next Story