ಎಚ್.ಸೂಫಿ
ಪಡುಬಿದ್ರೆ, ಮೇ 7: ಹೆಜಮಾಡಿಯ ಎನ್.ಎಸ್.ರೋಡ್ ನಿವಾಸಿ, ಸಮಾಜ ಸೇವಕ ಎಚ್.ಸೂಫಿ(71) ರವಿವಾರ ಹೃದಯಾಘಾತದಿಂದ ಮೃತಪಟ್ಟರು.
ಪಿಡಬ್ಲ್ಯುಡಿ ಗುತ್ತಿಗೆದಾರರಾಗಿದ್ದ ಇವರು, ಯಾವುದೇ ರಸ್ತೆ ಅಪಘಾತ ಸಂಭವಿಸಿದ ಮಾಹಿತಿ ಅರಿತ ತಕ್ಷಣ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ನೆರವಾಗುತ್ತಿದ್ದರು. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ, ಏಳು ಪುತ್ರಿಯರು, ಓರ್ವ ಪುತ್ರನ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
Next Story