ಸಾಪ್ಟ್ವೇರ್ ಆಧಾರಿತ ರಾಜ್ಯಮಟ್ಟದ ಹ್ಯಾಕಾಥಾನ್ ಸ್ಪರ್ಧೆ
ಉಡುಪಿ: ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯವು 24 ಘಂಟೆಗಳ ಹ್ಯಾಕೋತ್ಸವ ಎಂಬ ಸಾಪ್ಟ್ವೇರ್ ಆಧಾರಿತ ರಾಜ್ಯಮಟ್ಟದ ಹ್ಯಾಕಾಥಾನ್ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಮೊದಲ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಪರೀಕ್ಷೆ ಜೂ.2 ಮತ್ತು 3ರಂದು ನಡೆಸಲಾಗು ವುದು. ಈ ಹ್ಯಾಕಾಥಾನ್ನಲ್ಲಿ ರಾಜ್ಯಾದ್ಯಂತದ ಸ್ನಾತಕ ಮತ್ತು ಸ್ನಾತಕೋತರ ಪದವಿ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಬಹುದು.
ವಿಜೇತರಿಗೆ 1,00,000ರೂ. ಮೌಲ್ಯದ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸ್ಪರ್ಧಾಳುಗಳು ವಿದ್ಯಾಲಯದ ವೆಬ್ಸೈಟ್ ಲಿಂಕ್ಗೆ ಲಾಗಿನ್ ಆಗಬಹುದು ಮತ್ತು ಹೆಸರು ನೊಂದಾಯಿಸ ಬಹುದು ಎಂದು ಪ್ರಕಟಣೆ ತಿಳಿಸಿದೆ.
Next Story