ಮೈಸೂರು: ಇವಿಎಂ ಕಂಟ್ರೋಲ್ ಯೂನಿಟ್ ಒಡೆದು ಹಾಕಿದ ವ್ಯಕ್ತಿ ಪೊಲೀಸ್ ವಶಕ್ಕೆ
ಮೈಸೂರು: ಮತದಾನಕ್ಕೆ ಬಂದ ವ್ಯಕ್ತಿಯೊಬ್ಬ ಇವಿಎಂ ಕಂಟ್ರೋಲ್ ಯೂನಿಟ್ ಅನ್ನು ಒಡೆದು ಹಾಕಿದ ಪರಿಣಾಮ ಚಾಮುಂಡೇಶ್ವರಿ ಕ್ಷೇತ್ರದ ಮತಗಟ್ಟೆಯಲ್ಲಿ ಅರ್ಧಗಂಟೆ ಕಲಾ ಮತದಾನ ಪ್ರಕ್ರಿಯೆ ಸ್ಥಗಿತಗೊಂಡ ಘಟನೆ ವರದಿಯಾಗಿದೆ.
ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮೈಸೂರು ನಗರಕ್ಕೆ ಹೊಂದಿಕೊಂಡ ಮತಗಟ್ಟೆ 40 ರಲ್ಲಿ ಶಿವಮೂರ್ತಿ ಎಂಬಾತ ಬುಧವಾರ ಮತದಾನ ಮಾಡಲು ಬಂದು ಮತದಾನದ ಯೂನಿಟ್ ಅನ್ನು ಕಿತ್ತು ನೆಲಕ್ಕೆ ಬಿಸಾಕಿ ಹಾನಿಗೊಳಿಸಿದ್ದಾನೆ. ಕೂಡಲೇ ಮತಗಟ್ಟೆ ಅಧಿಕಾರಿಗಳು ಕಂಟ್ರೋಲ್ ಯೂನಿಟ್ ಅನ್ನು ಬದಲಾಯಿಸಿದ್ದಾರೆ. ಇದರಿಂದ ಅರ್ಧಗಂಟೆ ಮತದಾನದಲ್ಲಿ ವಿಳಂಬವಾಗಿತ್ತು ಎನ್ನಲಾಗಿದೆ.
''ಮತಯಂತ್ರಕ್ಕೆ ಹಾನಿಗೊಳಿಸಿದ ಆರೋಪಿ ಶಿವಮೂರ್ತಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಕೈಗೊಂಡಿದ್ದು. ಆರೋಪಿಯನ್ನು ತನಿಖೆಗೆ ಒಳಪಡಿಸಲಾಗಿದೆ'' ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
Next Story