ಕರಾವಳಿ: ಮೇ 15-16ರಂದು ಹಜ್ ಯಾತ್ರಿಗಳಿಗೆ ಲಸಿಕೆ
ಮೇ 17ರಂದು ತರಬೇತಿ ಶಿಬಿರ
ಮೇ 17ರಂದು ತರಬೇತಿ ಶಿಬಿರ
ಮಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಅಧೀನದಲ್ಲಿ 2023ರ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಾರ್ತಿ ಗಳಿಗೆ ಮೇ 15ರಂದು ಬೆಳಗ್ಗೆ 10 ಗಂಟೆಗೆ ಉಡುಪಿ ಜಿಲ್ಲೆಯಿಂದ ಹೋಗುವ ಹಾಜಿಗಳಿಗೆ ಮಲ್ಪೆಯ ಅಬೂಬಕರ್ ಜುಮಾ ಮಸೀದಿಯಲ್ಲಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಿಂದ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಾರ್ತಿಗಳಿಗೆ ಮೇ 16ರಂದು ಮಂಗಳೂರಿನ ಕೋಡಿಯಾಲ್ ಬೈಲ್ ಯೆನೆಪೊಯ ಆಸ್ಪತ್ರೆಯಲ್ಲಿ ಲಸಿಕೆ (ಚುಚ್ಚುಮದ್ದು) ನೀಡಲಾಗುವುದೆಂದು ಹಜ್ ಕಮಿಟಿಯ ಕಾರ್ಯ ನಿರ್ವಾಹಣಾ ಅಧಿಕಾರಿ ಸರ್ಪಾಝ್ ಖಾನ್ ತಿಳಿಸಿದ್ದಾರೆ.
ಮೇ 17ರಂದು ಬೆಳಗ್ಗೆ 9 ಗಂಟೆಯಿಂದ ಹಜ್ ಯಾತ್ರಾರ್ತಿಗಳಿಗೆ ತರಬೇತಿ ಶಿಬಿರವನ್ನು ಮಂಗಳೂರಿನ ಝೀನತ್ ಭಕ್ಷ್ ಯತೀಂಖಾನ ಹಾಲ್ನಲ್ಲಿ ಏರ್ಪಡಿಸಲಾಗಿದೆ ಎಂದು ದ.ಕ. ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹನೀಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story