ಮನೆಯಲ್ಲಿ ಮಲಗಿದ್ದ ಬಾಲಕಿ ಮೇಲೆ ಬಟ್ಟೆ ಹಾಕಿದ ತಾಯಿ; ನಾಪತ್ತೆ ದೂರಿಗೆ ಪೊಲೀಸರೇ ಸುಸ್ತು!
ಬೆಂಗಳೂರು, ಮೇ 12: ‘ಮನೆಯಲ್ಲಿ ಮಲಗಿದ್ದ ಮಗಳನ್ನು ಸರಿಯಾಗಿ ಗಮನಿಸದೇ ಪೋಷಕರು ನಾಪತ್ತೆಯಾಗಿದ್ದಾಳೆ’ ಎಂದು ಪೊಲೀಸರಿಗೆ ದೂರು ನೀಡಿ ಪೇಚಿಗೆ ಸಿಲುಕಿಸಿದ್ದ ವಿಚಿತ್ರ ಘಟನೆ ಕೆ.ಆರ್.ಪುರಂನ ಜನತಾ ಕಾಲನಿಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಪೊಲೀಸ್ ಠಾಣೆಗೆ ರಾತ್ರಿ 7.30ಕ್ಕೆ ಬಂದ ದಂಪತಿಯು ತಮ್ಮ ಆರು ವರ್ಷದ ಮಗಳು ಮನೆಯ ಮುಂದೆ ಆಟವಾಡುತ್ತಿದಾಗ ಕಾಣೆಯಾಗಿದೆ ಎಂದು ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರಿಗೆ ಆಟವಾಡುತ್ತಿದ್ದ ಮಗಳನ್ನು ಎಲ್ಲ ಕಡೆ ಹುಡುಕಿದ್ದರೂ ಸಿಗಲಿಲ್ಲ. ಹೀಗಾಗಿ ದೂರು ನೀಡಲು ಬಂದಿದ್ದೇವೆ ಎಂದು ದಂಪತಿ ತಿಳಿಸಿದ್ದರು.
ಕೂಡಲೇ ಕಾರ್ಯಪ್ರವೃತ್ತರಾಗಿದ್ದ ಕೆ.ಆರ್.ಪುರಂ ಪೊಲೀಸರು, ಮಗುವಿಗಾಗಿ ಎಲ್ಲ ಕಡೆ ಹುಡುಕಾಟ ನಡೆಸಿದ್ದಾರೆ. ನಾಪತ್ತೆಯಾದ ಸ್ಥಳದಲ್ಲಿ ಏನಾದರೂ ಸುಳಿವು ಸಿಗುವುದೋ ಎಂದು ಪೊಲೀಸರು ಹುಡುಕಾಟಕ್ಕೆಂದು ಮನೆಗೆ ಬಂದಾಗ ಮನೆಯೊಳಗೆ ಬಟ್ಟೆ ಕೆಳಗೆ ಮಗು ಮಲಗಿ ನಿದ್ರಿಸುತ್ತಿದ್ದಿದ್ದು, ಕಂಡು ಬಂದಿದೆ.
ಮಗಳು ಮಲಗಿದಾಗ ತಾಯಿ ಒಣಗಿದ್ದ ಬಟ್ಟೆಯನ್ನು ತಂದು ಮಗುವಿನ ಮೇಲೆ ಹಾಕಿ ಹೋಗಿದ್ದಳು. ಆದರೂ ಮಗು ಮಾತ್ರ ಚೆನ್ನಾಗಿ ಮಲಗಿ ನಿದ್ರಿಸುತ್ತಿತ್ತು. ಇದಾದ ನಂತರ ತಾಯಿ ಹಾಗೂ ತಂದೆ ಮಗುವಿಗಾಗಿ ಹುಡುಕಾಟ ನಡೆಸಿದ್ದು ಕಾಣದೇ ಇದ್ದಾಗ ಗಾಬರಿಯಾಗಿ ದೂರು ನೀಡಿದ್ದಾರೆ. ಪೋಷಕರ ಈ ಬೇಜವಾಬ್ದಾರಿಯಿಂದ ಪೊಲೀಸರು ಸುಸ್ತಾಗುವಂತಾಗಿದೆ.