Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಪವರ್ ಪಾಲಿಟಿಕ್ಸ್

ಪವರ್ ಪಾಲಿಟಿಕ್ಸ್

ಡಾ. ಚಮರಂಡಾ. ಚಮರಂ13 May 2023 10:49 AM IST
share
ಪವರ್ ಪಾಲಿಟಿಕ್ಸ್

ನಮ್ಮದು ಪ್ರಜಾಪ್ರಭುತ್ವ ಇರುವ ರಾಷ್ಟ್ರ ಎಂದು ಹೆಮ್ಮೆಯಿಂದ ಹೇಳುತ್ತೇವೆ. ಇಲ್ಲಿ ಪ್ರಜೆಗಳೇ ಪ್ರಭುಗಳು ಪ್ರಜೆಗಳದೇ ಸರಕಾರ ಎಂದೆಲ್ಲಾ ಬಣ್ಣಿಸುತ್ತೇವೆ. ಆದರೆ ನಿಜಕ್ಕೂ ನಮ್ಮಲ್ಲಿ ಪ್ರಜಾಪ್ರಭುತ್ವ ಇದೆಯೇ?

ಜನರಿಗೆ ಸಿಕ್ಕಿರುವ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ತಾನು ಈ ದೇಶದ ಪ್ರಜೆ, ತನ್ನ ಸಾಂವಿಧಾನಿಕ ಹಕ್ಕು ಚಲಾಯಿಸಿ ಪ್ರಜಾಸರಕಾರ ರಚನೆಗೆ ಕಾರಣವಾಗಿದ್ದೇನೆ, ಇದು ನನ್ನ ಸರಕಾರ ಎಂಬ ಗರ್ವ ಇರಬೇಕು.

ಜನರ ಕೈಲಿರುವ ಮತದಾನ ಪವರ್ ಪಾಲಿಟಿಕ್ಸ್‌ನ ಬಹಳ ಪವರ್ ಫುಲ್ ಅಸ್ತ್ರ. ಅದನ್ನು ಪವರ್‌ಫುಲ್ ಆಗಿ ಬಳಸುವ ಮೂಲಕವೇ ನಾವು ಸಶಕ್ತವಾದ ಪ್ರತಿನಿಧಿಯನ್ನು ಆಯ್ಕೆ ಮಾಡಬೇಕು. ಇದೇ ನಾವು ಪ್ರಜಾಪ್ರಭುತ್ವದಲ್ಲಿ ಭಾಗವಹಿಸುವ ಬಗೆ. ಆದರೆ...

ಪ್ರಜಾಪ್ರಭುತ್ವ ವ್ಯವಸ್ಥೆ ಬಂದಾಗಿನಿಂದಲೂ ದೇಶದಲ್ಲಿ ಶೇ.೭೫ ಕ್ಕಿಂತ ಹೆಚ್ಚು ಮತದಾನ ಆಗುವುದೇ ಇಲ್ಲ. ಆರಂಭದ ಕಾಲದಲ್ಲಿ ಕೇವಲ ಶೇ. ೪೦ ಮತದಾನ ಮಾತ್ರ ನಡೆದಿದೆ. ಇದಕ್ಕೆ ಕಾರಣ ಜನರ ಅನಕ್ಷರತೆ, ಮತದಾನದ ಬಗ್ಗೆ ತಿಳುವಳಿಕೆಯ ಕೊರತೆಗಳು ಎಂದು ಹೇಳಲಾಗುತ್ತಿತ್ತು.

ಬರಬರುತ್ತಾ ವಿವಿಧ ರೀತಿಯ ಸುಧಾರಣಾ ಕ್ರಮಗಳಿಂದ ಮತದಾನ ಈಗ ಶೇ. ೭೫ ತನಕ ಏರಿಕೆ ಕಂಡಿದೆ. ಈ ಏರಿಕೆ ಸಹ ವಿದ್ಯಾವಂತರಿಂದ ಆಗಿರುವಂತಹದ್ದಲ್ಲ! ಈಗಲೂ ಗ್ರಾಮಾಂತರ ಪ್ರದೇಶದ ನಿರಕ್ಷರಿಗಳಿಂದಲೇ ಇಷ್ಟು ಪ್ರಮಾಣದ ಮತದಾನ ಆಗುತ್ತಿರುವುದು.

ನಗರ ಪ್ರದೇಶದ ಅಕ್ಷರಸ್ಥ ಮತದಾರರು. ಈಗಲೂ ಪ್ರಜಾಪ್ರಭುತ್ವ ವ್ಯವಸ್ಥೆಯ ಈ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವುದೇ ಇಲ್ಲ!!

ದುರಂತವೆಂದರೆ ಪ್ರಜಾಪ್ರಭುತ್ವದ ಪವರ್ ಪಾಲಿಟಿಕ್ಸ್‌ನ  ಸಂಪೂರ್ಣ ಲಾಭ ಪಡೆಯುವವರೇ ಈ ಬೇಜವಾಬ್ದಾರಿಗಳಾದ ಅಕ್ಷರಸ್ಥರು!!

ತಮ್ಮ ಹೊಲಮನೆ ಕೂಲಿನಾಲಿ ಕೆಲಸದ ನಡುವೆಯೂ ಸಮಯ ಮಾಡಿಕೊಂಡು, ಬಿಸಿಲೋ ಮಳೆಯೋ ಇನ್ನೇನೋ ಸಂಕಷ್ಟದ ನಡುವೆಯೂ ಸರತಿಯಲ್ಲಿ ಕಾದು ನಿಂತು ತಪ್ಪದೆ ಮತದಾನದ ಹಕ್ಕನ್ನು ಚಲಾಯಿಸುವ ಗ್ರಾಮಾಂತರ ಪ್ರದೇಶದ ಜನರಿಗೆ ಮಾತ್ರ ಸರಕಾರದ ಬಹುತೇಕ ಸೌಲಭ್ಯಗಳು ಲಭ್ಯವಾಗುವುದೇ ಇಲ್ಲ!

ವೋಟಿಗಾಗಿ ಅಭ್ಯರ್ಥಿಗಳು ನೀಡುವ ಒಂದಷ್ಟು ಪುಡಿಗಾಸಷ್ಟೇ ತಮ್ಮ ವೋಟಿಗಿರುವ ಬೆಲೆ ಎಂದು ಬಹುಜನ ಅನಕ್ಷರಸ್ಥ ಭಾರತೀಯರು ಭಾವಿಸಿದ್ದಾರೆ. ಇಂತಹ ಅನಕ್ಷರಸ್ಥರ ವೋಟಿನಿಂದ ಪವರ್ ಗೆ ಬರುವ ಸರಕಾರಗಳು, ಪವರ್ ಸಿಕ್ಕ ನಂತರ ಮಾತ್ರ ಮತದಾನವನ್ನೇ ಮಾಡದ ಬೇಜವಾಬ್ದಾರಿ ಅಕ್ಷರಸ್ಥರ, ಐಟಿ, ಬಿಟಿ ತರದ ನೌಕರಶಾಹಿಗಳ, ಕಾರ್ಪೊರೇಟ್ ಜನರ ಸೇವೆಗೆ ಕಟಿಬದ್ಧವಾಗಿ ಕೆಲಸ ಮಾಡುತ್ತವೆ! ಇದು ಪ್ರಜಾಪ್ರಭುತ್ವಕ್ಕೆ ಮಾಡುವ ದ್ರೋಹವಲ್ಲವೇ?

ಶೇ.೨೫ ರಿಂದ ೩೦ರಷ್ಟು ಮತದಾನ ಮಾಡದ, ಪ್ರಜಾಪ್ರಭುತ್ವದಲ್ಲಿ ಭಾಗವಹಿಸದ ಬೇಜವಾಬ್ದಾರಿ ಜನರಿಗೆ ಸರಕಾರದ ಸವಲತ್ತುಗಳನ್ನು ನಿರಾಕರಿಸಬೇಕು. ತಿಳಿದೂ ತಿಳಿದು ಮತದಾನದಲ್ಲಿ ಭಾಗವಹಿಸದ ಇಂತಹವರ ಕೃತ್ಯವನ್ನು ದೇಶದ್ರೋಹವೆಂದೇ ಪರಿಗಣಿಸಬೇಕು. ಅವರಿಗೆ ನೀಡಿರುವ ಎಲ್ಲಾ ಸರಕಾರಿ ದಾಖಲೆಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಬೇಕು.

ಇಂತಹ ಬೇಜವಾಬ್ದಾರಿ ಜನರೇ ಆಳುವ ಸರಕಾರಗಳನ್ನು ನಿಯಂತ್ರಿಸುತ್ತಾರೆ.... ಸರಕಾರದ ತೀರ್ಮಾನಗಳನ್ನು ಟೀಕಿಸುತ್ತಾರೆ... ಬಡಜನರಿಗೆ ನೀಡುವ ಒಂದೆರಡು ಸವಲತ್ತುಗಳನ್ನು ವ್ಯಂಗ್ಯಮಾಡುತ್ತಾರೆ....

ತಮ್ಮ ಮೊಹಲ್ಲಾಗಳಲ್ಲಿ ಎಂದಾದರೊಂದು ದಿನ ಕಸ ವಿಲೇವಾರಿಯಾಗದಿದ್ದರೆ... ಒಂದು ಘಳಿಗೆ ಕರೆಂಟ್ ಹೋದರೆ, ನೀರು ಬಾರದಿದ್ದರೆ ಬೊಬ್ಬೆ ಹೊಡೆಯುತ್ತಾರೆ. ಸರಕಾರವನ್ನು, ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ!! ಪವರ್ ಪಾಲಿಟಿಕ್ಸ್ ಪ್ರಜಾಪ್ರಭುತ್ವದಲ್ಲಿಯೇ ಭಾಗವಹಿಸದ ಇಂತಹ ಠಕ್ಕರೇ ದೇವರು, ಧರ್ಮ, ಜಾತಿ, ಇತ್ಯಾದಿ ಹೆಸರಲ್ಲಿ ಗಲಭೆ ಸೃಷ್ಟಿಸುವವರು. ಇಂತಹ ಮತಗಳ್ಳರೇ ಆಹಾರ, ಆಚಾರ, ಸಂಪ್ರದಾಯಗಳ ಹೆಸರಲ್ಲಿ ಸಮಾಜದಲ್ಲಿ ಶಾಂತಿ ಕದಡುವವರು. ಓಟನ್ನೇ ಚಲಾಯಿಸದೆ, ಪ್ರಜಾತಂತ್ರಕ್ಕೆ ದ್ರೋಹ ಬಗೆವ ಇವರು ಇಷ್ಟು ಪವರ್ ತೋರುತ್ತಾರೆ!

ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕಿಗಾಗಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಬ್ರಿಟಿಷ್ ಸರಕಾರದಲ್ಲಿ ಹೋರಾಟ ಮಾಡಿ ಸಫಲರಾಗಿದ್ದಾರೆ. ನಿಮಗೆ ದೊರಕಿರುವ ಈ ಮತವು ನಿಮ್ಮ ಭವಿಷ್ಯ ರೂಪಿಸುವ ಅಸ್ತ್ರವಾಗಿದೆ. ಇದರ ಮೌಲ್ಯವು ಕೋಟಿಗಟ್ಟಲೆಯಾಗಿದೆ. ಜಾಣ್ಮೆಯಿಂದ ಬಳಸಿ ನಿಮ್ಮ ಅಭಿವೃದ್ಧಿಯನ್ನು ಕಂಡುಕೊಳ್ಳಿ ಎಂದು ಕರೆಕೊಟ್ಟಿದ್ದರು ಬಾಬಾಸಾಹೇಬರು.

ಇದೇ ಒಂದು ವೋಟಿನ ಹಕ್ಕಿಗಾಗಿ ದಕ್ಷಿಣ ಆಫ್ರಿಕಾದ ಜನ ಸತತ ಮೂವತ್ತು ವರ್ಷಗಳ ಕಾಲ ರಕ್ತಪಾತದ ಹೋರಾಟ ಮಾಡಿದ್ದಾರೆ. ಹಲವು ಜನರು ಈ ಹೋರಾಟದಲ್ಲಿ ಹತರಾಗಿದ್ದಾರೆ. ತನ್ನದೇ ನೆಲದಲ್ಲಿ ತನ್ನದೇ ಜನರ ಓಟಿನ ಹಕ್ಕಿಗಾಗಿ ನೆಲ್ಸನ್ ಮಂಡೇಲಾ ಹೋರಾಟ ಮಾಡಿದ ಸಲುವಾಗಿ ಸತತ ೨೬ ವರ್ಷಗಳ ಸೆರೆಮನೆ ಶಿಕ್ಷೆ ಅನುಭವಿಸಿದ್ದರು.

ಕೊನೆಗೂ ಅವರಿಗೆ ಹಲವರ ಬಲಿದಾನದ ಫಲವಾಗಿ ವೋಟು ಹಾಕುವ ಹಕ್ಕು ಸಿಕ್ಕಿ ನೆಲ್ಸನ್ ಮಂಡೇಲಾರೇ ದಕ್ಷಿಣ ಆಫ್ರಿಕಾದ ಅಧ್ಯಕ್ಷರೂ ಆದದ್ದು ಪ್ರಜಾಪ್ರಭುತ್ವದ ಅದ್ಭುತ. ಇದಕ್ಕೆ ಭಾರತದ ಸಂವಿಧಾನವೇ ಅವರಿಗೆ ಪ್ರೇರಣೆ ಎಂಬುದನ್ನು ಮಂಡೇಲಾ ಭಾರತ ಭೇಟಿಯ ಸಮಯದಲ್ಲಿ ಹೇಳಿದ್ದರು. ಅದೂ ಅಲ್ಲದೆ ಭಾರತದಂತಹ ಸಂವಿಧಾನವೇ ಬೇಕೆಂದು ಭಾರತೀಯ ತಜ್ಞರಿಂದಲೇ ಸಂವಿಧಾನ ಬರೆಸಿಕೊಂಡರು.

ಇದು ಸಂವಿಧಾನದ ಪವರ್. ಇದೇ ಪ್ರಜಾಪ್ರಭುತ್ವದ ಪವರ್.

ಇದನ್ನು ಪ್ರಜೆಗಳು ಸರಿಯಾಗಿ ಬಳಸಿದರೆ ಭಾರತಕ್ಕೆ ಎಂತಹ ಸರಕಾರ ಬೇಕು, ಎಂತಹ ಸರಕಾರ ಬೇಡ ಎಂಬುದನ್ನು ತೀರ್ಮಾನಿಸಬಹುದು. ಯಾವುದೇ ರಾಜಕಾರಣಿಯನ್ನೂ ಪ್ರಜೆಗಳು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ಹಾಗೆ ಮಾಡಬಹುದು.

ದೇಶವನ್ನು ಅಭಿವೃದ್ಧಿಯ ಉತ್ತುಂಗಕ್ಕೇರಿಸಬಹುದು. ದೇಶದ ಅಭಿವೃದ್ಧಿ ಇರು ವುದು ನಮ್ಮದೇ ಕೈಯಲ್ಲಿ. ಇದೇ ಪ್ರಜಾಪ್ರಭುತ್ವದ ಬ್ಯೂಟಿ ಮತ್ತು ಡೈನಮಿಸಂ.

share
ಡಾ. ಚಮರಂ
ಡಾ. ಚಮರಂ
Next Story
X