ಆರೋಗ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ(ಎಐ) ಬಳಕೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
ಜಿನೆವಾ, ಮೇ 16: ಸಾರ್ವಜನಿಕ ಆರೋಗ್ಯ ರಕ್ಷಣೆಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ(ಎಐ) ಬಳಕೆಯ ಬಗ್ಗೆ ಮಂಗಳವಾರ ಎಚ್ಚರಿಕೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ, ನಿರ್ಧಾರಕ್ಕೆ ಬರಲು ಎಐ ಬಳಸುವ ಅಂಕಿಅಂಶಗಳು ದುರ್ಬಳಕೆಯಾಗಿರುವ ಸಾಧ್ಯತೆಯಿದೆ ಎಂದಿದೆ.
ಎಐ ಸಾಮಥ್ರ್ಯದ ಬಗ್ಗೆ ತಾನು ಉತ್ಸುಕನಾಗಿದ್ದೇನೆ, ಆದರೆ ಇದೇ ವೇಳೆ, ಆರೋಗ್ಯ ಕ್ಷೇತ್ರದ ಮಾಹಿತಿಗೆ ಪ್ರವೇಶವನ್ನು ಸುಧಾರಿಸಲು, ನಿರ್ಧಾರ-ಬೆಂಬಲ ಸಾಧನವಾಗಿ ಮತ್ತು ರೋಗನಿರ್ಣಯದ ಆರೈಕೆಯನ್ನು ಸುಧಾರಿಸಲು ಇದನ್ನು ಹೇಗೆ ಬಳಸಲಾಗುತ್ತದೆ ಎಂಬ ಬಗ್ಗೆ ಆತಂಕವೂ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಎಐ(ಕೃತಕ ಬುದ್ಧಿಮತ್ತೆ)ಗೆ ತರಬೇತಿ ನೀಡಲು ಬಳಸಲಾಗುವ ಅಂಕಿಅಂಶಗಳು ಪಕ್ಷಪಾತದಿಂದ ಕೂಡಿರಬಹುದು ಮತ್ತು ತಪ್ಪು ದಾರಿಗೆಳೆಯುವ ಅಥವಾ ತಪ್ಪಾದ ಮಾಹಿತಿಯನ್ನು ಸೃಷ್ಟಿಸಬಹುದು. ಅಲ್ಲದೆ ತಪ್ಪು ಮಾಹಿತಿಗಳನ್ನು ಸೃಷ್ಟಿಸಲು ಮಾದರಿಗಳನ್ನು ದುರುಪಯೋಗ ಪಡಿಸಿಕೊಳ್ಳಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
Next Story