ದುಬೈ: ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು; ಅನಿವಾಸಿ ಕನ್ನಡಿಗರಿಂದ ದುಬೈಯಲ್ಲಿ ಸಂಭ್ರಮದ ವಿಜಯೋತ್ಸವ
ದುಬೈ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಐತಿಹಾಸಿಕ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ದುಬೈ ದೇರಾ ಸಿಟಿ ಸೆಂಟರ್ ಮುಂಭಾಗದ ಐಬಿಸ್ ಹೋಟೆಲ್ ಸಭಾಂಗಣದಲ್ಲಿ ವಿಜಯೋತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಜಿಸಿಸಿ ಕಾಂಗ್ರೆಸ್ ಕನ್ನಡಿಗರು, ಅನಿವಾಸಿ ಭಾರತೀಯ ಕಾಂಗ್ರೆಸ್ ಮುಖಂಡರೂ ಹಲವು ಸಂಘ ಸಂಸ್ಥೆಗಳ ನೇತಾರರೂ ಉದ್ಯಮಿಗಳೂ ಆದ ಅಶ್ರಫ್ ಶಾ ಮಾಂತೂರು, ಶರೀಫ್ ಕಾವು, ನೂರ್ ಮುಹಮ್ಮದ್ ನೀರ್ಕಜೆ ,ಅಬ್ದುಲ್ ಸಲಾಂ ಬಪ್ಪಳಿಗೆ ,ರಝಾಕ್ ಹಾಜಿ ಮಾಣಿಲ, ಶರೀಫ್ ಕೊಡಿನನೀರು , ಅಬ್ದುಲ್ ಖಾದರ್ ಹಾಜಿ ಬೈತಡ್ಕ ಹಾಗೂ ಇಂಡಿಯನ್ ಓವರ್ಸೀಸ್ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಸೆಲ್ ಸದಸ್ಯರಾದ ಅನ್ವರ್ ಮಾಣಿಲ ಹಾಗೂ ಜಿಸಿಸಿ ಕಾಂಗ್ರೆಸ್ ಕನ್ನಡಿಗರಾದ ಹನೀಫ್ ಮಜಲ್ ಸವಣೂರು, ರಫೀಕ್ ಸೋಂಪಾಡಿ ಸವಣೂರು, ರಾಯಿಝ್ ಸವಣೂರು, ಅಝೀಝ್ ಸೋಂಪಾಡಿ, ಆಸಿಫ್ ಮರೀಲ್ , ಜಾಬಿರ್ ಬಪ್ಪಳಿಗೆ, ಜಬಾರ್ ಬೈತಡ್ಕ ,ಆರಿಫ್ ಕೂರ್ನಡ್ಕ, ಜಾಬಿರ್ ಬೆಟ್ಟಂಬಾಡಿ, ನಾಸಿರ್ ಬಪ್ಪಳಿಗೆ, ಆರಿಫ್ ಕಾವು, ಅಲಿ ಮಾಣಿಲ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.