ಮಾವೇಲಿ ಎಕ್ಸ್ಪ್ರೆಸ್ಗೆ ಹೆಚ್ಚುವರಿ ಕೋಚ್
ಮಂಗಳೂರು: ಮಾವೇಲಿ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಲೀಪರ್ ಹಾಗೂ ಎಸಿ ಕೋಚ್ ಸೇರ್ಪಡೆ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.
ಮೇ 20ರಂದು ಮಂಗಳೂರು ಸೆಂಟ್ರಲ್ನಿಂದ ಹೊರಡುವ ನಂ. 16603 ‘ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್’ ಮಾವೇಲಿ ಎಕ್ಸ್ಪ್ರೆಸ್ ರೈಲಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಸ್ಲೀಪರ್ ಕೋಚ್ ಒದಗಿಸಲಾಗುವುದು.
ಮೇ 21ರಂದು ಮಂಗಳೂರು ಸೆಂಟ್ರಲ್ನಿಂದ ಹೊರಡುವ ಮಾವೇಲಿ ಎಕ್ಸ್ಪ್ರೆಸ್ಗೆ ತಾತ್ಕಾಲಿಕವಾಗಿ ಒಂದು ಹೆಚ್ಚುವರಿ ಎಸಿ 3 ಟಯರ್ ಕೋಚ್, ಮೇ 19 ಮತ್ತು 21ರಂದು ತಿರುವನಂತಪುರಂ ಸೆಂಟ್ರಲ್ನಿಂದ ಹೊರಡುವ ನಂ. 16604 ಮಾವೇಲಿ ಎಕ್ಸ್ಪ್ರೆಸ್ಗೆ 1 ಹೆಚ್ಚುವರಿ ಸ್ಲೀಪರ್ ಕೋಚ್ ಹಾಗೂ ಮೇ 22ರಂದು ತಿರುವನಂತ ಪುರಂನಿಂದ ಹೊರಡುವ ಮಾವೇಲಿ ಎಕ್ಸ್ಪ್ರೆಸ್ಗೆ 1 ಹೆಚ್ಚುವರಿ 3 ಟಯರ್ ಕೋಚ್ ಒದಗಿಸಲಾಗುವುದು ಎಂದು ತಿಳಿಸಿದೆ.
Next Story