ಡಿ.ಕೆ ಸುರೇಶ್ ಜತೆ ನನ್ನ ಸಂಬಂಧ ಚೆನ್ನಾಗಿದೆ, ವದಂತಿಗಳನ್ನು ಹಬ್ಬಿಸಬೇಡಿ: ಸಚಿವ ಎಂ.ಬಿ.ಪಾಟೀಲ್
''ನಮ್ಮಿಬ್ಬರಿಗೂ ಎಚ್ಚರಿಕೆ ಕೊಡುವವರು ಯಾರೂ ಇಲ್ಲ''
''ನಮ್ಮಿಬ್ಬರಿಗೂ ಎಚ್ಚರಿಕೆ ಕೊಡುವವರು ಯಾರೂ ಇಲ್ಲ''
ಬೆಂಗಳೂರು: 'ನನ್ನ ಹಾಗೂ ಸಂಸದ ಡಿಕೆ ಸುರೇಶ್ ಸಂಬಂಧ ಚೆನ್ನಾಗಿದೆ, ನಮ್ಮಿಬ್ಬರಿಗೆ ಎಚ್ಚರಿಕೆ ಕೊಡುವವರು ಯಾರೂ ಇಲ್ಲ, ವಿನಾಕಾರಣ ವದಂತಿಗಳನ್ನು ಹಬ್ಬಿಸಬೇಡಿ' ಎಂದು ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ನಾನು 6 ಬಾರಿ ಶಾಸಕನಾಗಿದ್ದೇನೆ, ಗೃಹಸಚಿವನಾಗಿ ಕೆಲಸ ಮಾಡಿದ್ದೇನೆ. ನಮ್ಮ ತಂದೆ-ತಾಯಿನೇ ಒಂದೂ ದಿನ ನನಗೆ ವಾರ್ನ್ ಮಾಡಿಲ್ಲ. ವಾರ್ನಿಂಗ್ ಎಂಬ ಪದ ನಮ್ಮ ಡಿಕ್ಷನರಿಯಲ್ಲೇ ಇಲ್ಲ. ವಾರ್ನಿಂಗ್ ಕೊಡ್ತೇವೆ ವಿನಃ ನಾವು ತೆಗೆದುಕೊಳ್ಳಲ್ಲ. ನಾನು ಯಾರಿಗೂ ಹೆದರುವವನಲ್ಲ' ಎಂದು ಹೇಳಿದರು.
ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಹೇಳಿಕೆ ನೀಡಿದ್ದಕ್ಕೆ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಡಿಕೆ ಸುರೇಶ್ ಅವರು ಎಚ್ಚರಿಕೆ ನೀಡಿದ್ದಾಂದು ಕೆಲವು ಮಾಧ್ಯಮಗಳು ವರದಿ ಮಾಡಿತ್ತು. ಇದೀಗ ಖುದ್ದು ಎಂ.ಬಿ.ಪಾಟೀಲ್ ಅವರೇ ಸ್ಪಷ್ಟನೆ ನೀಡಿದ್ದಾರೆ.
Next Story