varthabharthi


ನಿಧನ

ಲೀಲಾ ಎಂ. ಪೈ

ವಾರ್ತಾ ಭಾರತಿ : 24 May, 2023

ಉಡುಪಿ: ಮಣಿಪಾಲ್ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಅಧ್ಯಕ್ಷರಾಗಿದ್ದ ಉಡುಪಿಯ ಜನಪ್ರಿಯ ವೈದ್ಯ ದಿ.ಡಾ. ಕೊಚ್ಚಿಕಾರ್ ಮೋಹನದಾಸ್ ಪೈ ಅವರ ಪತ್ನಿ, ಮಣಿಪಾಲ್ ಮೀಡಿಯ ನೆಟ್ವರ್ಕ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಟಿ.ಸತೀಶ್ ಯು. ಪೈ ಅವರ ಅಕ್ಕ ಲೀಲಾ ಎಂ. ಪೈ (90) ವಯೋಸಹಜ ಕಾರಣದಿಂದ ಮೇ 23ರಂದು ಉಡುಪಿಯ ಡಾಟಿಎಂಎ ಪೈ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಸಮಾಜ ಸೇವಾಸಕ್ತಿಯ ಲೀಲಾ ಎಂ. ಪೈ ಉಡುಪಿಯ ಮುಕುಂದಕೃಪಾ ಶಾಲೆಯ ಸಂಚಾಲಕರಾಗಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗಿದ್ದರು. ಕಾಡಬೆಟ್ಟು ಟಿ.ಎ.ಪೈ ಮೋಡರ್ನ್ ಶಾಲೆಯ ಸಂಚಾಲಕರಾಗಿ, ಉಡುಪಿ ಶಾರದಾ ರೆಸಿಡೆನ್ಶಿಯಲ್ ಸ್ಕೂಲ್ ಸಮಿತಿ ಸದಸ್ಯರಾಗಿ, ಮಹಿಳಾ ಗ್ರಾಹಕರ ಸಹಕಾರ ಸಂಘದ ನಿರ್ದೇಶಕರಾಗಿಯೂ ಲೀಲಾ ಪೈ ಸೇವೆ ಸಲ್ಲಿಸಿದ್ದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)