varthabharthi


ದಕ್ಷಿಣ ಕನ್ನಡ

ವಿಟ್ಲ: ಹೊಡೆದಾಟ ಪ್ರಕರಣ; ಇಬ್ಬರು ಗ್ರಾ.ಪಂ ಸದಸ್ಯರು ಸೇರಿ 9 ಮಂದಿ ವಿರುದ್ಧ ಪ್ರಕರಣ ದಾಖಲು

ವಾರ್ತಾ ಭಾರತಿ : 25 May, 2023

ವಿಟ್ಲ: ಮಾಣಿಯಲ್ಲಿ ನಡೆದ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಇತ್ತಂಡದ ಇಬ್ಬರು ಗ್ರಾ.ಪಂ. ಸದಸ್ಯರು ಸೇರಿದಂತೆ ಒಟ್ಟು 9 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. 

ಅನಂತಾಡಿ ನಿವಾಸಿ ಈಶ್ವರ ನಾಯ್ಕ ಯಾನೆ ಪ್ರವೀಣ್ ನಾಯ್ಕ ನೀಡಿದ ದೂರಿನಂತೆ  ಮಹೇಂದ್ರ, ಪ್ರಶಾಂತ್, ಚಿರಂಜೀವಿ, ಪ್ರವೀಣ್, ದೇವಿಪ್ರಸಾದ್, ಹರೀಶ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.‌

ಕೊಡಾಜೆ ನಿವಾಸಿ ಮಹೇಂದ್ರ ನೀಡಿದ ದೂರಿನಂತೆ ಆರೋಪಿಗಳಾದ ಮಂಜುನಾಥ, ರಾಕೇಶ್, ಪ್ರವೀಣ್ ಅನಂತಾಡಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)