varthabharthi


ರಾಷ್ಟ್ರೀಯ

ಶೀಘ್ರದಲ್ಲಿ ಒಟಿಟಿ ಕಾರ್ಯಕ್ರಮಗಳಲ್ಲಿ ತಂಬಾಕು ವಿರೋಧಿ ಎಚ್ಚರಿಕೆ ಕಾಯ್ದೆಗೆ ತಿದ್ದುಪಡಿ ತರಲಿರುವ ಆರೋಗ್ಯ ಸಚಿವಾಲಯ

ವಾರ್ತಾ ಭಾರತಿ : 25 May, 2023

ಹೊಸದಿಲ್ಲಿ, ಮೇ 25: ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಹಾಗೂ ಟಿ.ವಿ. ಕಾರ್ಯಕ್ರಮದ ಸಂದರ್ಭ ತಂಬಾಕು ವಿರೋಧಿ ಎಚ್ಚರಿಕೆ ಹಾಗೂ ಹಕ್ಕು ನಿರಾಕರಣೆ ಪ್ರದರ್ಶಿಸುವಂತೆ ಒಟಿಟಿ ವೇದಿಕೆಗಳಲ್ಲಿ ಕೂಡ ಇದನ್ನು ಪ್ರದರ್ಶಿಸುವುದು ಶೀಘ್ರದಲ್ಲೇ ಕಡ್ಡಾಯವಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವಾಲಯ ಸಿಗರೇಟ್ ಹಾಗೂ ಇತರ ತಂಬಾಕು ಉತ್ಪನ್ನಗಳ ಕಾಯ್ದೆಗಳು-2004ಕ್ಕೆ ತಿದ್ದುಪಡಿ ತರಲು ಸಕ್ರಿಯವಾಗಿ ಪರಿಶೀಲನೆ ನಡೆಸುತ್ತಿದೆ. ಅಲ್ಲದೆ, ಈ ಸಂಬಂಧ ಶೀಘ್ರದಲ್ಲಿ ಅಧಿಸೂಚನೆ ಹೊರಡಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಕರಡು ಅಧಿಸೂಚನೆ ಪ್ರಕಾರ ತಂಬಾಕು ಉತ್ಪನ್ನಗಳು ಹಾಗೂ ಅದರ ಉಪಯೋಗದ ಕುರಿತು ಪ್ರದರ್ಶಿಸುವಾಗ ಆನ್ಲೈನ್ ವಿಷಯ ಪ್ರಕಾಶಕರು ಕಾರ್ಯಕ್ರಮದ ಆರಂಭ ಹಾಗೂ ಮಧ್ಯದಲ್ಲಿ ಕನಿಷ್ಠ 30 ಸೆಕೆಂಡುಗಳ ಕಾಲ ತಂಬಾಕು ಸೇವನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಕುರಿತು ಎಚ್ಚರಿಕೆ ನೀಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಕ್ರಮದ ಸಂದರ್ಭ ತಂಬಾಕು ಉತ್ಪನ್ನ ಅಥವಾ ಅದರ ಉಪಯೋಗವನ್ನು ಪ್ರದರ್ಶಿಸುವ ಸಂದರ್ಭ ಪರದೆಯ ಕೆಳಗೆ ತಂಬಾಕು ವಿರೋಧಿ ಸಂದೇಶಗಳನ್ನು ಪ್ರದರ್ಶಿಸುವ ಅಗತ್ಯತೆ ಕೂಡ ಇದೆ ಎಂದು ಅವರು ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)