ಬೆಂಗಳೂರು
ಜೆಡಿಎಸ್ ಪಕ್ಷದ ವಿಸರ್ಜನೆ ಯಾವಾಗ?: ಕುಮಾರಸ್ವಾಮಿಗೆ ಕಾಂಗ್ರೆಸ್ ತಿರುಗೇಟು

ಬೆಂಗಳೂರು: ಐದು ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದಿದ್ದ ಕಾಂಗ್ರೆಸ್ ಸರಕಾರದ ಬಣ್ಣ ಬಯಲಾಗಿದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, 'ನಾವು ಅರ್ಹ ಫಲಾನುಭವಿಗಳಿಗೆ ನಮ್ಮ ಗ್ಯಾರಂಟಿಗಳನ್ನು ಜಾರಿಗೊಳಿಸುವುದು ನಿಶ್ಚಿತ. ಕುಮಾರಸ್ವಾಮಿಯವರೇ, ಆ ಚಿಂತೆ ಬಿಡಿ. ಜೆಡಿಎಸ್ ಪಕ್ಷದ ವಿಸರ್ಜನಾ ಕಾರ್ಯಕ್ರಮದ ಮುಹೂರ್ತ ಯಾವಾಗ ಹೇಳಿ!?' ಎಂದು ಪ್ರಶ್ನೆ ಮಾಡಿದೆ.
''ನಾವು ಘೋಷಿಸಿದ 5 ಗ್ಯಾರಂಟಿಗಳನ್ನು ಜಾರಿಗೊಳಿಸುವುದು ಗ್ಯಾರಂಟಿ. ನಾವು ನಮ್ಮ ಜನರ ಹಿತ ಕಾಪಾಡುವ ಬದ್ಧತೆ ಹೊಂದಿದ್ದೇವೆ'' ಎಂದು ಕಾಂಗ್ರೆಸ್ ಮತ್ತೊಂದು ಟ್ವೀಟ್ ನಲ್ಲಿ ತಿಳಿಸಿದೆ.
ನಾವು ಅರ್ಹ ಫಲಾನುಭವಿಗಳಿಗೆ ನಮ್ಮ ಗ್ಯಾರಂಟಿಗಳನ್ನು ಜಾರಿಗೊಳಿಸುವುದು ನಿಶ್ಚಿತ.
— Karnataka Congress (@INCKarnataka) May 25, 2023
ಕುಮಾರಸ್ವಾಮಿಯವರೇ, ಆ ಚಿಂತೆ ಬಿಡಿ.
ಜೆಡಿಎಸ್ ಪಕ್ಷದ ವಿಸರ್ಜನಾ ಕಾರ್ಯಕ್ರಮದ ಮುಹೂರ್ತ ಯಾವಾಗ ಹೇಳಿ!? pic.twitter.com/jrEyzq4hIE
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ