ಬಿಜೆಪಿಯವರು ಅವಿವೇಕಿಗಳಂತೆ ಮಾತನಾಡುತ್ತಿದ್ದಾರೆ: ಪ್ರಿಯಾಂಕ್ ಖರ್ಗೆ
"ಬಿಜೆಪಿಯವರಿಗೆ ತಾಕತ್ತಿದ್ರೆ ಕಾನೂನು ಉಲ್ಲಂಘಿಸಲಿ"
ಬೆಂಗಳೂರು: ಶಾಂತಿ ಭಂಗ ಮಾಡುವ ಯಾವುದೇ ಸಂಘಟನೆಯಾದ್ರೂ ಕಾನೂನು ಕ್ರಮ ಆಗುತ್ತೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ಎಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಕತ್ತು ಇದ್ದರೆ ಬ್ಯಾನ್ ಮಾಡಿ ಎಂದು ಬಿಜೆಪಿಯವರು ಹೇಳ್ತಾರೆ. ಬಿಜೆಪಿಯವರಿಗೆ ತಾಕತ್ತಿದ್ರೆ ಕಾನೂನು ಉಲ್ಲಂಘಿಸಲಿ. ಅಂಬೇಡ್ಕರ್ ಅವರ ಸಂವಿಧಾನ ಏನು ಅಂತ ನಾವು ತೋರಿಸ್ತೀವಿ. ಬಿಜೆಪಿಯವರು ಯಾಕೆ ಸಂವಿಧಾನ ಪಾಲನೆ ಮಾಡುತ್ತೇವೆ ಅಂತ ಹೇಳುವುದಿಲ್ಲ. ಬಿಜೆಪಿಯವರು ವಿವೇಕತನ ಇಲ್ಲದೆಯೇ ಮಾತನಾಡ್ತಾ ಇದ್ದಾರೆ. ಅಷ್ಟೂ ಕೂಡ ವಿವೇಕ ಬಿಜೆಪಿಯವರಿಗೆ ಇಲ್ವಾ? ಎಂದು ಪ್ರಶ್ನಿಸಿದರು.
ನಾವು ಕೊಟ್ಟ 600 ಭರವಸೆಗಳಲ್ಲಿ 50 ಅಷ್ಟೇ ಈಡೇರಿಸೆದ್ದೇವೆ ಅಂತ ಬಿಜೆಪಿಯವರೇ ಹೇಳಿದ್ದಾರೆ. ಅವರಿಂದ ನಾವು ಪಾಠ ಕಲಿಯಬೇಕಾ?ಯಾವುದಾದರೂ ಸರ್ಕಾರದ ಯೋಜನೆಗಳು ಮಾನದಂಡ ಇಲ್ಲದೆಯೇ ನಡೆಯುತ್ತಾ? ಗ್ಯಾರೆಂಟಿಗಳ ಬಗ್ಗೆ ಮಾನದಂಡ ಯಾಕೆ ಎನ್ನುವುದು ಬಿಜೆಪಿಯವರ ಅವಿವೇಕಿತನ.
ಐದು ಗ್ಯಾರೆಂಟಿಗಳ ಬಗ್ಗೆ ನಾವು ನುಡಿದಂತೆ ನಡೆಯುತ್ತೇವೆ. ಸರ್ಕಾರ ಬಂದು ಹದಿನೈದು ದಿನ ಆಗಿದೆ ಅಷ್ಟೆ. ಗ್ಯಾರೆಂಟಿಗಳ ಜಾರಿಗೆ ಸಮಯ ಬೇಕು ಅಂತ ಮತದಾರರೇ ಹೇಳುತ್ತಿದ್ದಾರೆ. ಆದರೆ ಬಿಜೆಪಿಯವರಿಗೆ ಯಾಕಿಷ್ಟು ಆತಂಕ ಎಂದು ಗೊತ್ತಾಗುತ್ತಿಲ್ಲ.ಎಂದು ಹೇಳಿದರು.
ಮೊದಲ ಕ್ಯಾಬಿನೆಟ್ ನಲ್ಲಿ ತಾತ್ವಿಕ ಒಪ್ಪಿಗೆ ಪಡೆದಿದ್ದೇವೆ. 34 ಸಚಿವರ ಆಯ್ಕೆ ಮಾಡುವ ಮೂಲಕ ಭರ್ತಿಯಾಗಿದೆ. ಬಿಜೆಪಿಯವರಿಗೆ ಅವರ ವಿರೋಧ ಪಕ್ಷದ ನಾಯಕ ಯಾರು ಇನ್ನೂ ಗೊತ್ತಿಲ್ಲ. ಮೊದಲು ಅವರ ವಿಪಕ್ಷ ನಾಯಕ ಯಾರು ಅಂತ ಗುರುತಿಸಿಕೊಳ್ಳಳ್ಳಿ ಆ ಮೇಲೆ ನಮ್ಮ ಬಗ್ಗೆ ಮಾತಾಡಲಿ ಎಂದರು.