ಯು.ಕೆ.ಮಯ್ಯ
ಉಡುಪಿ, ಮೇ 28: ಹಿರಿಯ ಲೆಕ್ಕಪರಿಶೋಧಕ, ಅಜ್ಜರಕಾಡು ಅಗ್ನಿಶಾಮಕ ದಳ ಕಚೇರಿ ಬಳಿಯ ನಿವಾಸಿ ಯು.ಕೆ. ಮಯ್ಯ (83) ಇಂದು ಬೆಳಿಗ್ಗೆ ಹೃದಯಾ ಘಾತದಿಂದ ನಿಧನರಾದರು.
ಉಡುಪಿ ಜಿಲ್ಲೆಯ ಪ್ರಥಮ ಲೆಕ್ಕಪರಿಶೋಧಕರಾಗಿ ಸೇವೆ ಪ್ರಾರಂಭಿಸಿದ ಇವರು, ಉಡುಪಿ ವಿದ್ಯಾರತ್ನ ಕಟ್ಟಡದಲ್ಲಿ ಕಚೇರಿಯನ್ನು ಪ್ರಾರಂಭಿಸಿದ್ದರು. ಇವರ ಮಾರ್ಗದರ್ಶನದಲ್ಲಿ ನೂರಾರು ವಿದ್ಯಾರ್ಥಿಗಳು ಲೆಕ್ಕಪರಿಶೋಧಕರಾಗಿ ಹೊರಹೊಮ್ಮಿದ್ದಾರೆ.
ಮಣಿಪಾಲ ಗ್ರೂಪ್ ಆಫ್ ಸಂಸ್ಥೆಯಲ್ಲಿ ಹಲವಾರು ವರ್ಷಗಳ ಕಾಲ ಲೆಕ್ಕಪರಿಶೋಧಕರಾಗಿ ಕಾರ್ಯನಿರ್ವಹಿಸು ತ್ತಿದ್ದ ಇವರು, ಪ್ರಸ್ತುತ ಪರ್ಯಾಯ ಕೃಷ್ಣಪುರ ಮಠದ ಲೆಕ್ಕಪರಿಶೋಧಕರಾಗಿ ಸೇವೆಸಲ್ಲಿಸುತ್ತಿದ್ದರು. ಮೃತರು ಪತ್ನಿ, ಮೂರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Next Story