ಮಂಜೇಶ್ವರ: ತಾಲೂಕು ಮಟ್ಟದ ಕುಂದುಕೊರತೆ ನಿವಾರಣೆ ಅದಾಲತ್ ಉದ್ಘಾಟನೆ
ಮಂಜೇಶ್ವರ, ಮೇ 30: ಅದಾಲತ್ ಗಳ ಮೂಲಕ ಸರಕಾರದ ಸವಲತ್ತು ಹಾಗೂ ಸೌಲಭ್ಯಗಳನ್ನು ಕಲ್ಪಿಸುವುದು ಗುರಿ ಎಂದು ರಾಜ್ಯ ಬಂದರು ಖಾತೆ ಸಚಿವ ಆಹಮ್ಮರ್ ದೇವರ್ ಕೋವಿಲ್ ಹೇಳಿದರು.
ಅವರು ಮಂಗಳವಾರ ಮಂಜೇಶ್ವರ ತಾಲೂಕು ಕುಂದುಕೊರತೆ ನಿವಾರಣಾ ಅದಾಲತ್ ಉದ್ಘಾಟಿಸಿ ಮಾತನಾಡಿದರು.
ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಕೆ.ಇನ್ಬಾ ಶೇಖರ್ ಮುಖ್ಯ ಅತಿಥಿಯಾಗಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಶೆಮೀನಾ ಟೀಚರ್, ಮಂಗಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರುಬೀನಾ ನೌಫಲ್, ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಜೀನ್ ಲವಿನಾ ಮೊಂತೆರೊ, ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಕೆ.ಜಯಂತಿ, ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಸುಬ್ಬಣ್ಣ ಆಳ್ವ, ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜೆ.ಎಸ್.ಸೋಮಶೇಖರ ಮೊದಲಾದವರು ಮಾತನಾಡಿದರು.
ಎಡಿಎಂ ಕೆ.ನವೀನ್ ಬಾಬು ಸ್ವಾಗತಿಸಿ ವಂದಿಸಿದರು.