MRPL ವ್ಯವಸ್ಥಾಪಕ ನಿರ್ದೇಶಕರಾಗಿ ಸಂಜಯ್ ವರ್ಮಾ ನೇಮಕ
ಮಂಗಳೂರು: ಸಂಜಯ್ ವರ್ಮಾ ಅವರು MRPLನ ವ್ಯವಸ್ಥಾಪಕ ನಿರ್ದೇಶಕರಾಗಿ (ಹೆಚ್ಚುವರಿ ಹೊಣೆ) ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಭಾರತ ಸರಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಆದೇಶದಂತೆ ಜೂನ್ 1, 2023 ರಿಂದ ಅವರು ಈ ಸಿಪಿಎಸ್‌ಇ ಮಿನಿರತ್ನ ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ. ಈ ಹಿಂದೆ MRPLನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಎಂ.ವೆಂಕಟೇಶ್ ಮೇ 31ರಂದು ನಿವೃತ್ತರಾದ ಹಿನ್ನಲೆಯಲ್ಲಿ ಈ ನೇಮಕಾತಿ ನಡೆದಿದೆ.
ಭಾರತ ಸರ್ಕಾರದ ಉದ್ಯಮವಾದ ಒಎನ್ ಜಿಸಿಯ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ MRPLನಲ್ಲಿ ಮೂರೂವರೆ ದಶಕಗಳ ಸೇವೆಯಲ್ಲಿ ಅವರು ಆಪರೇಷನ್ಯೂಸ್ ಮ್ಯಾನೇಜ್‌ಮೆಂಟ್, ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್, ಮೆಟೀರಿಯಲ್ಸ್ ಮ್ಯಾನೇಜ್‌ಮೆಂಟ್ ಮತ್ತು ಹೆಲ್ತ್, ಸೇಫ್ಟಿ ಮತ್ತು ಎನ್ವಿರಾನ್‌ಮೆಂಟ್ ಮ್ಯಾನೇಜ್‌ಮೆಂಟ್‌ನಲ್ಲಿ ಸಂಸ್ಥೆಯ ಮುಖ್ಯಸ್ಥರಾಗಿದ್ದರು.
ಸಂಜಯ್ ವರ್ಮಾ ಅವರು ಜೂನ್ 2020ರಿಂದ MRPL ರಿಫೈನರಿ ನಿರ್ದೇಶಕರಾಗಿ ಮಂಡಳಿಯಲ್ಲಿ ಹಾಗೂ MSTPL, ONGC ಮಂಗಳೂರು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಮತ್ತು ಶೆಲ್-MRPL ಏವಿ ಯೇಷನ್ ನಲ್ಲೂ ಕಾರ್ಯ ನಿರ್ವಹಣೆಯ ಅನುಭವ ಹೊಂದಿದ್ದಾರೆ.
ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರಾಗಿರುವ ಸಂಜಯ್ ವರ್ಮಾ ಅವರು ಡಿಸೆಂಬರ್ 1993 ರಲ್ಲಿ MRPLಗೆ ಸೇರಿ ರಿಫೈನರಿಯ ಎಲ್ಲಾ ಮೂರು ಪ್ರಮುಖ ಹಂತಗಳ ಕಾರ್ಯಗತಗೊಳಿಸುವಿಕೆ ಮತ್ತು ಸ್ವಯಂ ಚಾಲಿತ ಘಟಕದ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
2020-23ರ ಆರ್ಥಿಕ ವರ್ಷದಲ್ಲಿ ಅತ್ಯುತ್ತಮ ನಿರ್ವಹಣೆ ಹಾಗು ಆರ್ಥಿಕ ಸ್ಥಿತಿಯಿಂದಾಗಿ ಇಡೀ ದೇಶದಲ್ಲಿ ಭಾರತದ ಅತಿದೊಡ್ಡ ಆಪರೇಟೆಡ್ ಸಿಂಗಲ್-ಸೈಟ್ ಆಯಿಲ್ ಪಿಎಸ್‌ಯು ಎಂಬ ಹೆಗ್ಗಳಿಕೆಗೆ ಪಾತ್ರವಾದ MRPL ಹೈಡ್ರೋಕಾರ್ಬನ್ ಸಂಸ್ಕರಣಾಗಾರದ ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಮಾ ಅವರು ಎಂಪಿಪಿಎಲ್ ನ ವಿಸ್ತರಣೆಯನ್ನು ಪೂರೈಸುವ, ಗುರಿಗಳನ್ನು ಕಾರ್ಯಗತಗೊಳಿಸುವ ಮತ್ತು ಮಹತ್ವಾಕಾಂಕ್ಷೆಯ ಮಾರ್ಕೆಟಿಂಗ್ ಉದ್ಯಮಗಳಲ್ಲಿ ತೊಡಗಿಸಿಕೊಳ್ಳುವ ಪ್ರಯತ್ನಗಳಲ್ಲಿ ಮುನ್ನಡೆಸಲು ಸಿದ್ಧವಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.