ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಮತ್ತೆ 6 ಚೀತಾ
ಭೋಪಾಲ: ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಜೂನ್ ಮೂರನೇ ವಾರದ ಅಂತ್ಯದಲ್ಲಿ ಮತ್ತೆ ಆರು ಚೀತಾಗಳನ್ನು ಬಿಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಎರಡು ಹೆಣ್ಣು ಚೀತಾಗಳು ಸೇರಿದಂತೆ 6 ಚೀತಾಗಳನ್ನು ಬಿಡಲಾಗುವುದು. ಈಗಾಗಲೇ ಉದ್ಯಾನದಲ್ಲಿ ನಿರ್ಮಿಸಲಾದ ಆವರಣದಲ್ಲಿ 3 ಚೀತಾಗಳು ಇವೆ. ಚೀತಾ ಚಾಲನಾ ಸಮಿತಿ ಬುಧವಾರ ನಡೆಸಿದ ಮೊದಲ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.
Next Story