ವಡೋದರ: ಟ್ರಕ್-ಟ್ಯಾಂಕರ್ ಢಿಕ್ಕಿ; ಮೂವರು ಸಜೀವ ದಹನ
ಅಹಮದಾಬಾದ್: ಗುಜರಾತ್‌ನ ವಡೋದರ ಜಿಲ್ಲೆಯಲ್ಲಿ ರವಿವಾರ ಬೆಳಗ್ಗೆ ಟ್ರಕ್ ಮತ್ತು ಟ್ಯಾಂಕರ್ ಮುಖಾಮುಖಿ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಮೂವರು ಸಜೀವ ದಹನಗೊಂಡಿದ್ದಾರೆ ಹಾಗೂ ಒಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಡೋದರಾ ನಗರದಿಂದ 40 ಕಿ.ಮೀ. ದೂರದಲ್ಲಿರುವ ಮಸಾರ್ ಗ್ರಾಮದ ಬಳಿ ಬೆಳಿಗ್ಗೆ 6.30 ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ವಡು ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟೈಲ್ಸ್ ತುಂಬಿಕೊಂಡು ಗುಜರಾತ್‌ನ ಮೊರ್ಬಿಯಿಂದ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ಟ್ರಕ್ , ಪದ್ರಾ ಮತ್ತು ಜಂಬೂಸರ್‌ಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಖಾಲಿ ಟ್ಯಾಂಕರ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ನಂತರ ಲಾರಿ ಮತ್ತು ಟ್ಯಾಂಕರ್‌ಗಳ ಚಾಲಕ ಕ್ಯಾಬಿನ್‌ಗಳು ಬೆಂಕಿಗೆ ಆಹುತಿಯಾಗಿವೆ. ಎರಡೂ ವಾಹನಗಳ ಚಾಲಕರು ಹಾಗೂ ಟ್ಯಾಂಕರ್ ಕ್ಲೀನರ್ ಸುಟ್ಟು ಕರಕಲಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಟ್ರಕ್ ಕ್ಲೀನರ್‌ಗೆ ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ವಡೋದರದ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅವರು ಹೇಳಿದರು.
An accident occurred in the early hours of today on the #Padra-#Jambusar Highway where three people, including the drivers of both vehicles and one another died when a #truck and #tanker collided.#ourvadodara #vadodara #news #newsupdate pic.twitter.com/iEzZOmEr98
— Our Vadodara (@ourvadodara) June 4, 2023