ಬೊಳ್ಳೂರು ಅಂದುಂಞಿ ಬ್ಯಾರಿ
ಹಳೆಯಂಗಡಿ, ಜೂ. 4: ಹಳೆಯಂಗಡಿ ಸಮೀಪದ ಬೊಳ್ಳೂರಿನ ಪ್ರತಿಷ್ಠಿತ ಮುಕ್ರಿ ಕುಟುಂಬದ ಹಿರಿಯರಾದ ಅಂದುಂಞಿ ಬ್ಯಾರಿ (76) ಇಂದು ಬೆಳಗ್ಗೆ ಬೊಳ್ಳೂರಿನ ತನ್ನ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.
ಮೃತರು, ಪತ್ನಿ, ಐವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಮಾಜಿ ಶಾಸಕ ಅಭಯ ಚಂದ್ರ ಜೈನ್, ಎಸ್ ಡಿ ಪಿ ಐ ಮುಖಂಡ ರಿಯಾಝ್ ಫರಂಗಿಪೇಟೆ ಹಾಗೂ ಮುಖಂಡ ಅಲ್ಫೋನ್ಸೊ ಪ್ರಾಂಕೊ, ಜಿಲ್ಲಾ ಕಾಂಗ್ರೆಸ್ ಮುಖಂಡ ಮಿಥುನ್ ರೈ, ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಎಮ್.ಎ. ಖಾದರ್, ಅಬ್ದುಲ್ ಅಝೀಝ್, ಪುತ್ತುಭಾವ ಕಾರ್ನಾಡ್ ಸೇರಿದಂತೆ ಇತರ ಗಣ್ಯರು ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
Next Story