ಒಡಿಶಾ ರೈಲು ದುರಂತಕ್ಕೆ ಕೋಮುಬಣ್ಣ: ತುಮಕೂರಿನ ಬಿಜೆಪಿ ನಾಯಕಿಯ ಪೋಸ್ಟ್ ವೈರಲ್
ಒಡಿಶಾ ಪೊಲೀಸರ ಎಚ್ಚರಿಕೆ, ಮಾಹಿತಿ ಸಂಗ್ರಹ
ಒಡಿಶಾ ಪೊಲೀಸರ ಎಚ್ಚರಿಕೆ, ಮಾಹಿತಿ ಸಂಗ್ರಹ
ತುಮಕೂರು: ಒಡಿಶಾದಲ್ಲಿ ನಡೆದ ರೈಲು ಅಪಘಾತದ ಪ್ರಕರಣಕ್ಕೆ ಕೋಮು ಬಣ್ಣ ನೀಡಿ, ರೈಲ್ವೆ ಹಳಿಯ ಬಳಿ ಮಸೀದಿಯಿತ್ತು ಎಂದು ಫೋಟೊವೊಂದನ್ನು ತುಮಕೂರಿನ ಬಿಜೆಪಿ ನಾಯಕಿಯೊಬ್ಬರು ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ತುಮಕೂರಿನ ಬಿಜೆಪಿ ನಾಯಕಿ ಶಕುಂತಲಾ ಎಸ್ ಎನ್ನುವವರು ಈ ಘಟನೆಗೆ ಮಸೀದಿ ಪಕ್ಕದಲ್ಲಿ ಇರುವುದು ಕಾರಣ ಎಂದು ಬಿಂಬಿಸುವ ಅರ್ಥದಲ್ಲಿ ಫೋಟೊ ಪೋಸ್ಟ್ ಮಾಡಿದ್ದಾರೆ. ಅವರ ಫೇಸ್ ಬುಕ್ ಪೋಸ್ಟ್ ನ ಸ್ಕ್ರೀನ್ ಶಾಟ್ ಎಲ್ಲೆಡೆ ವೈರಲ್ ಆಗುತ್ತಿದೆ.
ವೈರಲ್ ಆಗುತ್ತಿರುವ ಫೇಸ್ ಬುಕ್ ಪೋಸ್ಟ್
ಮತ್ತೊಂದು ಕಡೆ 'ಕೋಮು ಆಯಾಮ' ನೀಡಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಒಡಿಶಾ ಪೊಲೀಸರು ಎಚ್ಚರಿಸಿದ್ದಾರೆ. ಅಲ್ಲದೇ, ಈ ಪೋಸ್ಟ್ ಹಂಚಿಕೊಂಡವರ ಬಗ್ಗೆ ಒಡಿಶಾ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
Next Story