ತಂದೆಯನ್ನು ನೆನೆದು ಭಾವುಕರಾದ ಬಸವರಾಜ ಬೊಮ್ಮಾಯಿ
ಬೆಂಗಳೂರು, ಜೂ.6: ನಗರದ ಗಾಂಧಿ ಭವನದಲ್ಲಿ ಮಂಗಳವಾರ ನಡೆದ ‘ಎಸ್. ಆರ್. ಬೊಮ್ಮಾಯಿ ಜನ್ಮ ಶತಮಾನತ್ಸವ’ ಕಾರ್ಯಕ್ರಮದಲ್ಲಿ ತಂದೆಯ ಸರಳತೆ ಮತ್ತು ಜೀವನ ನಡೆಸಿದ ಬಗೆಯನ್ನು ನೆನೆದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವುಕರಾದರು.
ಎಸ್. ಆರ್ ಬೊಮ್ಮಾಯಿಯವರ ಕಾಲದಲ್ಲಿ ತೆಗೆದುಕೊಂಡ ಕೆಲವು ತೀರ್ಮಾನಗಳು ಈಗಿನ ಕಾಲಘಟ್ಟದಲ್ಲಿ ಪ್ರಸ್ತುತ ಇರದಿರಬಹುದು. ಆದರೆ ಆಗಿನ ಸಂದರ್ಭದಲ್ಲಿ ಅವುಗಳ ಪ್ರಾಮುಖ್ಯತೆ ಬೇರೆಯೇ ಇತ್ತು ಎಂದು ತಂದೆಯ ಆಡಳಿತದ ಶೈಲಿಯನ್ನು ಬೊಮ್ಮಾಯಿ ನೆನೆದರು.
ನನ್ನ ರಾಜಕೀಯ ಜೀವನದಲ್ಲಿ ಯಡಿಯೂರಪ್ಪ ಅವರನ್ನು ತಂದೆ ಸ್ಥಾನದಲ್ಲಿ, ಗುರುವಿನ ಸ್ಥಾನದಲ್ಲಿ ನೋಡುತ್ತೇನೆ. ರಾಜಕೀಯವಾಗಿ ನನ್ನನ್ನು ಕೈ ಹಿಡಿದುಕೊಂಡು ಬಂದು ಅವಕಾಶ ನೀಡಿ ರಾಜಕೀಯದಲ್ಲಿ ಗಟ್ಟಿಯಾಗಿ ನಿಲ್ಲುವಂತೆ ಮಾಡಿದರು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
Next Story