ಸುಳ್ಳು ಪ್ರಕರಣ ದಾಖಲು ಆರೋಪ: ಇಬ್ಬರು ಇನ್ಸ್ ಪೆಕ್ಟರ್ ಗಳ ಅಮಾನತು
ಬೆಂಗಳೂರು, ಜೂ.7: ವೈದ್ಯರೊಬ್ಬರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಚಾರ್ಜ್‍ಶೀಟ್ ಸಲ್ಲಿಸುವ ಮೂಲಕ ಕಾನೂನು ದುರ್ಬಳಕೆ ಮಾಡಿಕೊಂಡಿದ್ದ ಆರೋಪದ ಮೇಲೆ ಇಬ್ಬರು ಇನ್ಸ್ ಪೆಕ್ಟರ್ ಗಳನ್ನು ನಗರ ಪೊಲೀಸ್ ಆಯುಕ್ತ ದಯಾನಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮಂಜುನಾಥ್ ಹಾಗೂ ದೇವನಹಳ್ಳಿ ಠಾಣೆಯ ಇನ್ಸ್ ಪೆಕ್ಟರ್ ಲಕ್ಷ್ಮಣ್‍ನಾಯಕ್ ಅಮಾನತುಗೊಂಡಿದ್ದಾರೆ.
2022ರಲ್ಲಿ ಅಮಾಯಕ ವೈದ್ಯರನ್ನು ಕರೆತಂದು ಡ್ರಗ್ಸ್ ಪ್ರಕರಣದ ಅಡಿಯಲ್ಲಿ ಅಂದಿನ ಇನ್ಸ್ ಪೆಕ್ಟರ್ ಲಕ್ಷ್ಮಣ್ ನಾಯಕ್ ಎಫ್‍ಐಆರ್ ದಾಖಲಿಸಿದ್ದರು. ವರ್ಗಾವಣೆ ಬಳಿಕ ಬಂದ ಮಂಜುನಾಥ್ ವೈದ್ಯರ ಮೇಲೆ ಚಾರ್ಜ್‍ಶೀಟ್ ಹಾಕಿದ್ದರು. ಈ ಇಬ್ಬರೂ ಪೊಲೀಸರು ಕಾನೂನು ಉಲ್ಲಂಘನೆ ಮಾಡಿ ವೈದ್ಯರನ್ನು ಪ್ರಕರಣಕ್ಕೆ ಸಿಲುಕಿಸಿದ ಹಿನ್ನೆಲೆ, ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ವರದಿ ನೀಡಿದ್ದರು. ವರದಿ ಆಧಾರದ ಮೇಲೆ ಇಬ್ಬರನ್ನೂ ಅಮಾನತು ಮಾಡಲಾಗಿದೆ.
Next Story