ಪ್ರಗತಿ ಪರಿಶೀಲನೆಗೆ ಗೈರು ಹಾಜರಾದ ಅಧಿಕಾರಿ ಅಮಾನತಿಗೆ ಸಚಿವ ಝಮೀರ್ ಅಹ್ಮದ್ ಆದೇಶ
ಬೆಂಗಳೂರು: ಪ್ರಗತಿ ಪರಿಶೀಲನೆಗೆ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡ ವಸತಿ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಸಚಿವ ಝಮೀರ್ ಅಹ್ಮದ್, ಮೇಲಧಿಕಾರಿಗಳ ಅನುಮತಿ ಪಡೆಯದೇ ಸಕಾಲಿಕ ಕಾರಣ ಕೊಡದೇ ಗೈರು ಹಾಜರಾದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ಇದೇ ವೇಳೆ ಆಯುಕ್ತರ ಅನುಮತಿ ಪಡೆಯದೆ ಸಭೆಗೆ ಗೈರು ಆಗಿದ್ದ ಮಂಡ್ಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ದರ್ಶನ್ ಜೈನ್ ಅವರನ್ನು ಅಮಾನತು ಮಾಡುವಂತೆ ಸ್ಥಳದಲ್ಲೇ ಅದೇಶಿಸಿದರು.
Next Story