ಪಡುಬಿದ್ರಿ: ಅನಾರೋಗ್ಯದಿಂದ ವ್ಯಕ್ತಿ ಮೃತ್ಯು
ಪಡುಬಿದ್ರಿ, ಜೂ.9: ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟ ಉಚ್ಚಿಲ ಮುಳ್ಳಗುಡ್ಡೆ ಎಂಬಲ್ಲಿ ಘಟನೆ ನಡೆದಿದೆ.
ಮೃತರನ್ನು ಉಚ್ಚಿಲ ಮುಳ್ಳಗುಡ್ಡೆಯ ನಿವಾಸಿ ಶಾಬನ್ ಬ್ಯಾರಿ ಎಂಬವರ ಮಗ ಅಶ್ರಫ್(39) ಎಂದು ಗುರುತಿಸಲಾಗಿದೆ. ರಕ್ತಹೀನತೆ ಖಾಯಿಲೆಯಿಂದ ಬಳಲುತ್ತಿದ್ದ ಇವರು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 4 ತಿಂಗಳುಗಳಿಂದ ತೀರಾ ಅನಾರೋಗ್ಯದಿಂದ ಕೆಲಸ ಮಾಡಲಾಗದೇ ಮನೆಯಲ್ಲಿಯೇ ಇದ್ದರು. ಜೂ.7ರಂದು ಸಂಜೆ ಜ್ವರ ಬಂದ ಕಾರಣ ಜ್ವರದ ಔಷಧಿ ಕುಡಿದು ರಾತ್ರಿ ಮನೆಯಲ್ಲಿ ಮಲಗಿದ್ದರು. ಜೂ.8ರ ನಸುಕಿನ ವೇಳೆ ತೀರಾ ಅಸ್ವಸ್ಥಗೊಂಡ ಇವರನ್ನು ಮಪಾಲದ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
Next Story