ಜ್ಞಾನ ಯೋಗ, ಕರ್ಮ ಯೋಗವನ್ನು ಜನ ಮರೆತಿದ್ದಾರೆ: ಡಾ. ಮಹಾಬಲೇಶ್ವರ ರಾವ್
ಉಡುಪಿ, ಜೂ.10: ಕುಂಜಿಬೆಟ್ಟಿನ ಡಾ.ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ಮೂರನೆಯ ಸೆಮಿಸ್ಟರ್ ವಿದ್ಯಾರ್ಥಿ ಶಿಕ್ಷಕರು ಪಠ್ಯಕ್ರಮದ ಭಾಗವಾಗಿ ಇತ್ತೀಚೆಗೆ ‘ಯೋಗದಿನ’ ವನ್ನು ಆಚರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಮನ್ವಯಾಧಿಕಾರಿ ಡಾ. ಮಹಾಬಲೇಶ್ವರ ರಾವ್ ಮಾತನಾಡಿ, ಚಿತ್ತವೃತ್ತಿ ನಿರೋಧ ಎಂಬ ಅರ್ಥದ ಯೋಗ ಇಂದು ಯೋಗಾಭ್ಯಾಸ ಅಥವಾ ದೈಹಿಕ ವ್ಯಾಯಾಮ ಎಂಬ ಸಂಕುಚಿತ ಅರ್ಥ ಪಡೆದುಕೊಂಡಿದೆ ಎಂದರು.
ಯೋಗ ಬೇರೆ, ಯೋಗಾಭ್ಯಾಸ ಬೇರೆ. ದುರಂತದ ಸಂಗತಿ ಎಂದರೆ ಜನ ಯೋಗದಿಂದ ರೋಗಮುಕ್ತಿ ಎಂಬ ಪರಿಕಲ್ಪನೆಗೆ ಹೆಚ್ಚು ಒತ್ತು ಕೊಡುತ್ತಿ ದ್ದಾರೆಯೇ ಹೊರತು ಕರ್ಮ ಯೋಗ ಮತ್ತು ಜ್ಞಾನ ಯೋಗವನ್ನು ನಿರ್ಲಕ್ಷಿಸಿದ್ದಾರೆ ಎಂದು ನುಡಿದರು.
ಯೋಗ ಜಾಗೃತಿ, ಯೋಗದಿಂದ ರೋಗಮುಕ್ತರಾಗಿ, ದೈನಂದಿನ ಚಟುವಟಿಕೆಗಳಲ್ಲಿ ಯೋಗ, ಏಕಾಗ್ರತೆಗಾಗಿ ಯೋಗ, ಸಂಗೀತ ಯೋಗ ಮುಂತಾದ ಕಾರ್ಯಕ್ರಮಗಳನ್ನು ಮತ್ತು ವಿವಿಧ ಬಗೆಯ ಆಸನಗಳ ಪ್ರಾತ್ಯಕ್ಷಿಕೆ ಗಳನ್ನು ವಿದ್ಯಾರ್ಥಿ ಶಿಕ್ಷಕರು ನಡೆಸಿಕೊಟ್ಟರು.
ಆರಂಭದಲ್ಲಿ ರೋಶ್ನಿ ರೋಡ ಸೋನ್ಸ್ ಸ್ವಾಗತಿಸಿದರೆ, ಆಶಾಪ್ರಿಯ ಫೆರ್ನಾಂಡಿಸ್ ವಂದಿಸಿದರು. ನಿಶಾ ಕಾರ್ಯಕ್ರಮ ನಿರೂಪಿಸಿದರು.