ಬೆಂಗಳೂರು | ವಿದೇಶಿ ಯೂಟ್ಯೂಬರ್ ಜೊತೆ ಅನುಚಿತ ವರ್ತನೆ: ವ್ಯಾಪಾರಿಯ ಸೆರೆ
ಹಳೆಯ ವೀಡಿಯೊ ಎಂದ ಬೆಂಗಳೂರು ಕಮಿಷನರ್
ಬೆಂಗಳೂರು, ಜೂ.12: ನಗರದ ಚಿಕ್ಕಪೇಟೆಯಲ್ಲಿ ವಿದೇಶಿ ಪ್ರವಾಸಿಗನೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ವ್ಯಾಪಾರಿಯೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ನವಾಬ್ ಹಯಾತ್ ಶರೀಫ್ ಬಂಧಿತ ಆರೋಪಿ ಎಂದು ತಿಳಿದುಬಂದಿದೆ.
ನೆದರ್ ಲ್ಯಾಂಡ್ ಪ್ರಜೆ ಪೆಡ್ರೋ ಮೊಟಾ ಎಂಬ ಯೂಟ್ಯೂಬರ್ ರವಿವಾರ ಚಿಕ್ಕಪೇಟೆಯ ವಾರದ ಸಂತೆಯ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದ ವೇಳೆ ವ್ಯಕ್ತಿಯೋರ್ವ ಆತನ ಕೈಯನ್ನು ಹಿಡಿದು ದಬಾಯಿಸಿ ಅನುಚಿತವಾಗಿ ವರ್ತಿಸಿದ್ದಾನೆ. ಕೆಲವೇ ಕ್ಷಣಗಳಲ್ಲಿ ಆತ ಪೆಡ್ರೋನ ಕೈಯನ್ನು ಬಿಟ್ಟಿದ್ದಾನೆ ಮತ್ತು ಪೆಡ್ರೋ ನಗುತ್ತಾ ಸ್ಥಳದಿಂದ ದೂರ ಧಾವಿಸುವುದು ವೈರಲ್ ವೀಡಿಯೊದಲ್ಲಿ ಸೆರೆಯಾಗಿದೆ.
ಈ ನಡುವೆ ವಿದೇಶಿ ಪ್ರಜೆಗೆ ಕಿರುಕುಳ ನೀಡಿದ ಆರೋಪಿಯನ್ನು ಗುರುತಿಸಿರುವ ಪೊಲೀಸರು ವ್ಯಾಪಾರಿ ನವಾಬ್ ಹಯಾತ್ ಶರೀಫ್ ನನ್ನು ರವಿವಾರ ಬಂಧಿಸಿ ಆತನ ವಿರುದ್ಧ Section 92 of the Karnataka Police Act ನಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
''ಹಳೆಯ ವಿಡಿಯೋ ವೈರಲ್''
'ಅದೊಂದು ಹಳೆಯ ವಿಡಿಯೋ ಆಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕಿರುಕುಳ ನೀಡಿದ ವ್ಯಕ್ತಿಯನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗಿದೆ' ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಟ್ವೀಟ್ ಮಾಡಿದ್ದಾರೆ.
It's a old video which has come into circulation now. The person harassing in the video has been identified traced and action taken. No scope for such highhandedness in Naamma Bengaluru against anybody. https://t.co/gx4dYPZUwe
— B. Dayananda, IPS ಪೊಲೀಸ್ ಆಯುಕ್ತರು, ಬೆಂಗಳೂರು ನಗರ (@CPBlr) June 12, 2023