ರಾಜ್ಯದಲ್ಲಿ ಅಂಬಾನಿ, ಅದಾನಿ ಸೇರಿ ಎಲ್ಲರೂ ಬಂಡವಾಳ ಹೂಡಬಹುದು: ಸಚಿವ ಎಂ.ಬಿ.ಪಾಟೀಲ್
ಬೆಂಗಳೂರು, ಜೂ. 13: ಉದ್ಯಮಿಗಳಾದ ಮುಖೇಶ್ ಅಂಬಾನಿ, ಗೌತಮ್ ಅದಾನಿ ಸೇರಿದಂತೆ ಯಾರೋ ಬೇಕಾದರೂ ರಾಜ್ಯದಲ್ಲಿ ಬಂಡವಾಳ ಹೂಡಲು ಅವಕಾಶ ಇದೆ. ಇದಕ್ಕೆ ಯಾವುದೇ ನಿಬರ್ಂಧವಿಲ್ಲ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬಾನಿಯಾಗಲಿ, ಆದಾನಿಯಾಗಲಿ ಯಾರೂ ಬೇಕಾದರೂ ಬಂಡವಾಳ ಹೂಡಬಹುದು. ಇದರಿಂದ ರಾಜ್ಯಕ್ಕೆ ಪ್ರಯೋಜನವಾಗಲಿದೆ.ಅಲ್ಲದೆ, ಈಗಾಗಲೇ ರಾಜ್ಯದಲ್ಲಿ ಹೂಡಿಕೆಗೆ ಸಂಬಂಧಿಸಿದಂತೆ ಅಂಬಾನಿ ಉದ್ಯಮ ಸಮೂಹದವರು ನನ್ನನ್ನು ಭೇಟಿ ಮಾಡಿದರು. ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಮುಂದಾಗಿದ್ದಾರೆ ಎಂದು ವಿವರಿಸಿದರು.
ಈ ಸಮೂಹಗಳು ತಪ್ಪು ಮಾಡಿದ್ದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ಅವರ ಹೂಡಿಕೆ ನೈಜವೇ ಎಂಬುದು ಮುಖ್ಯ. ನೈಜವೇ ಆಗಿದ್ದರೆ ಹೂಡಿಕೆ ಅವಕಾಶ ಮಾಡಿಕೊಡುತ್ತೇವೆ. ಅದರಲ್ಲಿ ತಪ್ಪೇನಿದೆ. ಅಲ್ಲದೆ, ರಾಜ್ಯಕ್ಕೆ ಬಂಡವಾಳ ಹರಿದುಬಂದರೆ, ತ್ವರಿತವಾಗಿ ಉದ್ಯೋಮ ಸೃಷ್ಟಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
Next Story