ವಿಶ್ವದ ಅತೀ ದೊಡ್ಡ ಕಿಡ್ನಿಕಲ್ಲು ಹೊರತೆಗೆದು ವಿಶ್ವದಾಖಲೆ ಬರೆದ ಶ್ರೀಲಂಕಾದ ವೈದ್ಯರು
ಕೊಲಂಬೊ: ವಿಶ್ವದ ಅತೀ ದೊಡ್ಡ ಕಿಡ್ನಿಕಲ್ಲು ಹೊರತೆಗೆಯುವ ಮೂಲಕ ಶ್ರೀಲಂಕಾದ ಸೇನಾ ವೈದ್ಯರು ಗಿನ್ನೆಸ್ ವಿಶ್ವದಾಖಲೆ ಬರೆದಿದ್ದಾರೆ.
ಕೊಲಂಬೋದ ಸೇನಾ ಆಸ್ಪತ್ರೆಯಲ್ಲಿ ಈ ತಿಂಗಳ ಆರಂಭದಲ್ಲಿ ನಡೆಸಿದ ಶಸ್ತ್ರಚಿಕಿತ್ಸೆಯಲ್ಲಿ 13.372 ಸೆ.ಮೀ ಉದ್ದದ 801 ಗ್ರಾಮ್ ತೂಕದ ಕಿಡ್ನಿಕಲ್ಲನ್ನು ಹೊರತೆಗೆದು ವಿಶ್ವದಾಖಲೆ ಬರೆಯಲಾಗಿದೆ. ಈ ಹಿಂದಿನ ವಿಶ್ವದಾಖಲೆ ಭಾರತದ ವೈದ್ಯರ ಹೆಸರಲ್ಲಿತ್ತು. 2004ರಲ್ಲಿ ಭಾರತದ ವೈದ್ಯರು ಸುಮಾರು 13 ಸೆ.ಮೀ ಉದ್ದದ ಕಿಡ್ನಿಕಲ್ಲನ್ನು ಹೊರತೆಗೆದಿದ್ದರು.
2023ರ ಜೂನ್ನಲ್ಲಿ ಕೊಲಂಬೋದ ಆಸ್ಪತ್ರೆಯಲ್ಲಿ ವೈದ್ಯರಾದ ಲೆಕ ಡಾ. ಕೆ. ಸುದರ್ಶನ್, ಕ್ಯಾಪ್ಟನ್ ಡಾ. ಡಬ್ಲ್ಯುಪಿಎಸ್ ಪಥಿರತ್ನ ಮತ್ತು ಡಾ. ಥಾಮಸ್ ಪ್ರೇಮತಿಲಕ ಅವರನ್ನೊಳಗೊಂಡ ತಂಡ ಈ ಸಾಧನೆ ಮಾಡಿದೆ ಎಂದು ಗಿನ್ನೆಸ್ ವಿಶ್ವದಾಖಲೆ ಸಂಸ್ಥೆ ಹೇಳಿಕೆ ನೀಡಿದೆ.
Next Story