ಮಹಿಳೆ ನಾಪತ್ತೆ
ಉಡುಪಿ, ಜೂ.15: ನಿಟ್ಟೂರು ಸ್ತ್ರೀ ಸೇವಾ ನಿಕೇತನದಲ್ಲಿ ಕಳೆದ ಒಂದು ತಿಂಗಳಿನಿಂದ ವಾಸವಿದ್ದ ಮಣಿಯಮ್ಮ ಯಾನೆ ವಿದ್ಯಾ ಶೆಟ್ಟಿಯಾರ್ (36) ಎಂಬ ಮಹಿಳೆ ಜೂನ್ 14ರ ಮುಂಜಾನೆಯಿಂದ ನಾಪತ್ತೆಯಾಗಿ ದ್ದಾರೆ.
5 ಅಡಿ 5 ಇಂಚು ಎತ್ತರ, ಕಪ್ಪು ಮೈಬಣ್ಣ, ಸಪೂರ ಉದ್ದನೆಯ ಶರೀರ ಹೊಂದಿದ್ದು, ಕನ್ನಡ, ತುಳು, ಹಿಂದಿ, ತೆಲುಗು ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Next Story