ಭಟ್ಕಳ ತಾಲೂಕು 16 ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕಟ
ಭಟ್ಕಳ: ತಾಲೂಕಿನ 16 ಗ್ರಾಮ ಪಂಚಾಯತಿಗಳ 2ನೆ ಅವಧಿಗಾಗಿ ಅಧ್ಯಕ್ಷ ಉಪಾಧ್ಯಕ್ಷ ಹುದ್ದೆಯ ಮೀಸಲಾತಿ ಪ್ರಕ್ರಿಯೆ ಉ.ಕ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅಧ್ಯಕ್ಷತೆಯಲ್ಲಿ ಇಲ್ಲಿನ ನ್ಯೂ ಇಂಗ್ಲಿಷ್ ಸ್ಕೂಲ್ ಪಕ್ಕದಲ್ಲಿರುವ ಕಮಲಾಬಾಯಿ ರಾಮನಾಥ್ ಶಾನಭಾಗ ಸಭಾಂಗಣದಲ್ಲಿ ಶುಕ್ರವಾರ ಜರುಗಿತು.
ಒಟ್ಟು 16 ಗ್ರಾ.ಪಂ. ನ 8 ಗ್ರಾ.ಪಂ ಗಳಲ್ಲಿ ಮಹಿಳೆಯರಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮೀಸಲಾತಿ ದೊರಕಿದೆ. ಇದರಿಂದಾಗಿ ಶೇ.50ರಷ್ಟು ಸ್ಥಾನಗಳು ಮಹಿಳೆಯರ ಪಾಲಾದಂತಾಗಿದೆ.
ಬೈಲೂರು ಗ್ರಾ.ಪಂ ಕ್ಯಟಗೇರಿ-ಎ ಅಧ್ಯಕ್ಷ, ಸಾ.ಮಹಿಳೆ ಉಪಾಧ್ಯಕ್ಷ, ಮಾವಳ್ಳಿ-1 ಕೆಟಗೇರಿ-ಎ ಮಹಿಳೆ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ, ಮಾವಳ್ಳಿ-2 ಸಾಮಾನ್ಯ ಮಹಿಳೆ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ, ಕೊಪ್ಪಾ ಸಾಮಾನ್ಯ ಅಧ್ಯಕ್ಷ, ಕೆಟಗೆರಿ -ಎ ಉಪಾಧ್ಯಕ್ಷ, ಕಾಯ್ಕಿಣಿ ಸಾಮಾನ್ಯ ಅಧ್ಯಕ್ಷ, ಎಸ್.ಸಿ ಉಪಾಧ್ಯಕ್ಷ, ಬೇಂಗ್ರೆ ಕೆಟಗೆರಿ-ಬಿ ಮಹಿಳೆ ಅಧ್ಯಕ್ಷ, ಕೆಟಗೆರಿ-ಎ ಉಪಾಧ್ಯಕ್ಷ, ಶಿರಾಲಿ ಸಾಮಾನ್ಯ ಅಧ್ಯಕ್ಷ, ಕೆಟಗೆರಿ-ಎ ಮಹಿಳೆ ಉಪಾಧ್ಯಕ್ಷ, ಹೆಬಳೆ ಕೆಟಗೆರಿ-ಎ ಮಹಿಳೆ ಅಧ್ಯಕ್ಷ, ಎಸ್.ಸಿ ಉಪಾಧ್ಯಕ್ಷ, ಮಾವಿನಕುರ್ವೆ ಎಸ್.ಸಿ ಅಧ್ಯಕ್ಷ, ಸಾಮಾನ್ಯ ಮಹಿಳೆ ಉಪಾಧ್ಯಕ್ಷ, ಮುಂಡಳ್ಳಿ ಎಸ್.ಸಿ ಮಹಿಳೆ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ, ಯಲ್ವಡಿಕವೂರ್ ಎಸ್.ಟಿ ಮಹಿಳೆ ಅಧ್ಯಕ್ಷ, ಕೆಟಗೆರಿ-ಬಿ ಮಹಿಳೆ ಉಪಾಧ್ಯಕ್ಷ, ಮುಟ್ಟಳ್ಳಿ ಸಾಮಾನ್ಯ ಮಹಿಳೆ ಅಧ್ಯಕ್ಷ, ಎಸ್.ಟಿ. ಮಹಿಳೆ ಉಪಾಧ್ಯಕ್ಷ, ಮಾರುಕೇರಿ ಸಾಮಾನ್ಯ ಮಹಿಳೆ ಅಧ್ಯಕ್ಷ, ಸಾಮಾನ್ಯ ಉಪಾಧ್ಯಾಕ್ಷ, ಕೋಣಾರ ಸಾಮಾನ್ಯ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ, ಬೆಳಕೆ ಕೆಟಗೆರಿ-ಎ ಅಧ್ಯಕ್ಷ, ಸಾಮಾನ್ಯ ಮಹಿಳೆ ಉಪಾಧ್ಯಕ್ಷ, ಹಾಡುವಳ್ಳಿ ಸಾಮಾನ್ಯ ಅಧ್ಯಕ್ಷ, ಕೆಟಗೆರಿ-ಎ ಮಹಿಳೆ ಉಪಾಧ್ಯಕ್ಷ.
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮೀಸಲಾತಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ, ಭಟ್ಕಳ ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಎಸ್., ತಾ.ಪಂ. ಕಾರ್ಯ ನಿರ್ವಣಾಧಿಕಾರಿ ಪ್ರಭಾಕರ್ ಚಿಕ್ಕನಮನೆ ಸಾಥ್ ನೀಡಿದರು.