ನನಗೆ ರಾಜಕೀಯ ಸಾಕಾಗಿದೆ: ಸಂಸದ ಡಿ.ಕೆ.ಸುರೇಶ್
ರಾಮನಗರ, ಜೂ.17: ಇಂದಿನ ರಾಜಕಾರಣ ಅಷ್ಟೇನು ಚೆನ್ನಾಗಿಲ್ಲ. ನನಗೂ ರಾಜಕೀಯ ಸಾಕಾಗಿ ಹೋಗಿದೆ. ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಕಾರ್ಯಕರ್ತರು, ಮುಖಂಡರ ಸಲಹೆ ಪಡೆಯುತ್ತೇನೆ. ಯಾರು ಸೂಕ್ತ ಎಂದು ಅವರು ತೀರ್ಮಾನ ಮಾಡುತ್ತಾರೋ ಅವರಿಗೆ ಬೆಂಬಲ ನೀಡುತ್ತೇನೆ ಎಂದು ರಾಮನಗರ ಸಂಸದ ಸುರೇಶ್ ನುಡಿದರು.
Next Story