ಜೂನ್ ತಿಂಗಳಲ್ಲಿ ಹೆಚ್ಚು ವಿದ್ಯುತ್ ಬಿಲ್; ಬೆಸ್ಕಾಂ ಸ್ಪಷ್ಟೀಕರಣ
ಬೆಂಗಳೂರು, ಜೂ. 19: ‘ಜೂನ್ ತಿಂಗಳಲ್ಲಿ ಗ್ರಾಹಕರಿಗೆ ನೀಡಿರುವ ವಿದ್ಯುತ್ ಬಿಲ್ಲಿನ ಮಾಹಿತಿಯನ್ನು ತಂತ್ರಾಂಶದಲ್ಲಿ ಸೇರ್ಪಡೆಗೊಳಿಸುವ ಕಾರ್ಯವು ಪ್ರಗತಿಯಲ್ಲಿರುವ ಕಾರಣ ಗ್ರಾಹಕರಿಗೆ ಆನ್‍ಲೈನ್‍ನಲ್ಲಿ ಋಣಾತ್ಮಕ ಬಿಲ್ಲುಗಳು ಬಂದಿದೆ, ಇದನ್ನು ಎರಡು ದಿನಗಳ ಒಳಗಾಗಿ ಸರಿಪಡಿಸಲಾಗುವುದು’ ಎಂದು ಬೆಸ್ಕಾಂ ಪ್ರಕಟನೆ ತಿಳಿಸಿದೆ.
ಗ್ರಾಹಕರಿಗೆ ನೀಡಿರುವ ಭೌತಿಕ ಬಿಲ್ಲಿನಲ್ಲಿ ಸರಿಯಾದ ಬಿಲ್ ಮೊತ್ತ ನಮೂದಾಗಿರುತ್ತದೆ, ಆ ಮೊತ್ತವನ್ನು ಆನ್‍ಲೈನ್ ಪಾವತಿಯಲ್ಲಿ ನಮೂದಿಸಿ ಪಾವತಿಸಾಲು ಕೋರಲಾಗಿದೆ. ಬಿಲ್ ಕುರಿತು ಗೊಂದಲಗಳಿದ್ದರೆ ಗ್ರಾಹಕರು ಯಾವುದೇ ಆತಂಕಕ್ಕೆ ಒಳಗಾಗದೆ ಸಂಬಂದಿಸಿದ ಉಪ ವಿಭಾಗಕ್ಕೆ ಭೇಟಿ ನೀಡಿ ಅಥವಾ 1912ಗೆ ಕರೆ ಮಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಬೆಸ್ಕಾಂ ತಿಳಿಸಿದೆ.
ಬೆಸ್ಕಾಂ ಗ್ರಾಹಕರಿಗೆ ಅವರ ಬಳಕೆಗೆ ಅನುಗುಣವಾಗಿ ಮಾತ್ರವೇ ವಿದ್ಯುತ್ ಬಿಲ್ಲನ್ನು ನೀಡಿದ್ದು, ಯಾವುದೇ ಅಧಿಕ ಶುಲ್ಕವನ್ನು ವಿಧಿಸಿರುವುದಿಲ್ಲ. ಜುಲೈ ತಿಂಗಳಲ್ಲಿ ಯಾವುದೇ ಬಿಲ್ಲಿಂಗ್ ಸಮಸ್ಯೆಗಳು ಇರುವುದಿಲ್ಲ ಎಂದು ಬೆಸ್ಕಾಂ ಪ್ರಕಟನೆಯಲ್ಲಿ ಸ್ಪಷ್ಟನೆ ನೀಡಿದೆ.