'ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್' ವತಿಯಿಂದ ವಿಶ್ವ ಯೋಗ ದಿನಾಚರಣೆ
ಬೆಂಗಳೂರು: ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ಆಡಳಿತ ಮತ್ತು ಅಪರೇಷನ್ಸ್ ವಿಭಾಗದ ನಿರ್ದೇಶಕರಾದ ರೂಪ.ಆರ್.(ಕೆಎಎಸ್) ಇವರ ನೇತೃತ್ವದಲ್ಲಿ " ವಿಶ್ವ ಯೋಗ ದಿನಾಚರಣೆ " ಆಚರಿಸಲಾಯಿತು.
ಬುಧವಾರ ಬೆಳಗ್ಗೆ 8 ರಿಂದ 9 ಗಂಟೆಯವರೆಗೆ "ಆರೋಗ್ಯ ಸೌಧ” ಕಚೇರಿಯ ಆವರಣದಲ್ಲಿ ಎಲ್ಲಾ ಸಿಬ್ಬಂದಿ ವರ್ಗದವರೊಂದಿಗೆ 'ಸದೃಢ ಆರೋಗ್ಯ ಕರ್ನಾಟಕ' ನಿರ್ಮಾಣಕ್ಕೆ ಯೋಗ ಅತಿಮುಖ್ಯವಾದದ್ದು ಎಂಬ ಸದುದ್ದೇಶದೊಂದಿಗೆ ಆಚರಿಸಲಾಯಿತು.