1 ರಿಂದ 10ನೇ ತರಗತಿ ವಿದ್ಯಾರ್ಥಿಗಳ ಬ್ಯಾಗ್ ಹೊರೆಯನ್ನು ತಗ್ಗಿಸುವಂತೆ ಸರಕಾರ ಆದೇಶ
ಬೆಂಗಳೂರು, ಜೂ.21: ಒಂದರಿಂದ 10ನೆ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಬ್ಯಾಗ್ ಹೊರೆಯನ್ನು ತಗ್ಗಿಸುವಂತೆ ಆದೇಶ ಹೊರಡಿಸಲಾಗಿದೆ. ಡಿಎಸ್ಇಆರ್ಟಿ ಸಂಸ್ಥೆಯು ಅಧ್ಯಯನವನ್ನು ನಡೆಸಿ ವರದಿಯನ್ನು ಸಲ್ಲಿಸಿದ್ದು, ಅದಂತೆ ಸರಕಾರ ಕ್ರಮ ವಹಿಸಿದೆ.
1 ಮತ್ತು 2ನೆ ತರಗತಿಯ ಮಕ್ಕಳ ಶಾಲಾ ಬ್ಯಾಗ್ನ ತೂಕ 1.5ರಿಂದ 2ಕೆ.ಜಿ., 3ರಿಂದ 5ನೆ ತರಗತಿಯ ಮಕ್ಕಳ ಶಾಲಾ ಬ್ಯಾಗ್ನ ತೂಕ 2ರಿಂದ 3 ಕೆ.ಜೆ., 6ರಿಂದ 8ನೆ ತರಗತಿಯ ಮಕ್ಕಳ ಶಾಲಾ ಬ್ಯಾಗ್ನ ತೂಕ 3 ರಿಂದ 4 ಕೆ.ಜಿ., 9 ಮತ್ತು 10ನೆ ತರಗತಿಯ ಮಕ್ಕಳ ಶಾಲಾ ಬ್ಯಾಗ್ನ ತೂಕ 4 ರಿಂದ 5 ಕೆ.ಜಿ. ಇರಬೇಕು ಎಂದು ತಿಳಿಸಿದೆ.
1 ಮತ್ತು 2ನೆ ತರಗತಿಯ ಮಕ್ಕಳಿಗೆ ಯಾವುದೇ ಗೃಹಪಾಠ ಅಥವಾ ಮನೆಗೆಲಸವನ್ನು ನೀಡದಂತೆ ತಿಳಿಸಿದೆ. 1ರಿಂದ 5ನೆ ತರಗತಿ ಮಕ್ಕಳಿಗೆ ಭಾಷೆ, ಗಣಿತ ಹಾಗೂ ಪರಿಸರ ವಿಜ್ಞಾನ ವಿಷಯ ಹೊರತುಪಡಿಸಿ ಇನ್ಯಾವುದೇ ಪಠ್ಯವನ್ನು ನಿಗಿಪಡಿಸದಂತೆ ತಿಳಿಸಿದೆ.
Next Story