'ಲಾಲ್ ಸಿಂಗ್ ಛಡ್ಡಾ ಬಹಿಷ್ಕರಿಸಿ' ಎಂಬ ಹ್ಯಾಶ್‍ಟ್ಯಾಗ್‍ಗೆ ಆಮಿರ್ ಖಾನ್ ಪ್ರತಿಕ್ರಿಯೆ ಏನು ಗೊತ್ತೇ?
ಹೊಸದಿಲ್ಲಿ: ಸಾಮಾಜಿಕ ಜಾಲತಾಣದಲ್ಲಿ ಬಾಯ್ಕಾಟ್ ಬಾಲಿವುಡ್, ಬಾಯ್ಕಾಟ್ ಲಾಲ್ ಸಿಂಗ್ ಛಡ್ಡಾ ಎಂಬ ಹ್ಯಾಶ್‍ಟ್ಯಾಗ್‍ಗಳು ಟ್ರೆಂಡಿಂಗ್ ಆಗುತ್ತಿರುವ ಕುರಿತು ಪ್ರತಿಕ್ರಿಯಿಸಿರುವ ನಟ ಆಮಿರ್ ಖಾನ್ ಇದರಿಂದ ತಮಗೆ ಬೇಸರವಾಗಿದೆ ಎಂದಿದ್ದಾರೆ,
"ನಾನು ಭಾರತವನ್ನು ಇಷ್ಟ ಪಡದವನು ಎಂದು ಅನೇಕ ಜನರು ತಮ್ಮ ಹೃದಯಗಳಲ್ಲಿ ಅಂದುಕೊಂಡು ಹೀಗೆ ಹೇಳುತ್ತಿದ್ದಾರೆ. ಆದರೆ ಅದು ನಿಜವಲ್ಲ, ಆದರೆ ದುರದೃಷ್ಟವಶಾತ್ ಕೆಲ ಜನರು ಹಾಗೆ ಅಂದಕೊಳ್ಳುತ್ತಾರೆ. ನಾನು ನಿಜವಾಗಿಯೂ ನಮ್ಮ ದೇಶವನ್ನು ಪ್ರೀತಿಸುತ್ತೇನೆ. ಆದುದರಿಂದ ದಯವಿಟ್ಟು ನನ್ನ ಚಿತ್ರಗಳನ್ನು ಬಹಿಷ್ಕರಿಸಬೇಡಿ, ದಯವಿಟ್ಟು ನನ್ನ ಚಿತ್ರಗಳನ್ನು ವೀಕ್ಷಿಸಿ" ಎಂದು ಆಮಿರ್ ಹೇಳಿದ್ದಾರೆ.
ಅಮೀರ್ ಖಾನ್ ರ ಹೊಸ ಸಿನಿಮಾ ಲಾಲ್ ಸಿಂಗ್ ಛಡ್ಡಾವನ್ನು ಬಹಿಷ್ಕರಿಸುವಂತೆ ಬಲಪಂಥೀಯರು ಸಾಮಾಜಿಕ ತಾಣದಲ್ಲಿ ವ್ಯಾಪಕ ಅಭಿಯಾನ ಪ್ರಾರಂಭಿಸಿದ್ದರು. ಈ ಸಿನಿಮಾ ಪ್ರಸಿದ್ಧ ಹಾಲಿವುಡ್ ಚಿತ್ರ ಫಾರೆಸ್ಟ್ ಗಂಪ್ ನ ರಿಮೇಕ್ ಆಗಿದೆ.
Next Story