ಬೋವಿಕ್ಕಾನ | ಕಾಡುಹಂದಿ (Wild boar) ದಾಳಿ: ತಂದೆ-ಮಗನಿಗೆ ಗಂಭೀರ ಗಾಯ
ಸಾಂದರ್ಭಿಕ ಚಿತ್ರ (Photo credit: wikipedia)
ಕಾಸರಗೋಡು, ಆ.24: ಕಾಡುಹಂದಿಗಳ (Wild boar) ಹಿಂಡು ಮೈಮೇಲೆ ಎರಗಿದ್ದರಿಂದ ತಂದೆ ಮತ್ತು ಮಗ ಗಂಭೀರ ಗಾಯಗೊಂಡ ಘಟನೆ ಬೋವಿಕ್ಕಾನ(Bovikanam)ದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಬೋವಿಕ್ಕಾನ ವ್ಯಾಪಾರಿ ಅಬ್ದುಲ್ಲ (57) ಹಾಗೂ ಪುತ್ರ ಫಝಲ್ ರಹ್ಮಾನ್ (24) ಗಾಯಗೊಂಡವರಾಗಿದ್ದಾರೆ. ಇವರಿಬ್ಬರು ಕಳೆದ ರಾತ್ರಿ ತಮ್ಮ ಅಂಗಡಿ ಮುಚ್ಚಿ ಸ್ಕೂಟರ್ ನಲ್ಲಿ ಮನೆಗೆ ಮರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಇದನ್ನೂ ಓದಿ: ಕುಂದಾಪುರ | ರಾಷ್ಟ್ರೀಯ ಹೆದ್ದಾರಿಯಲ್ಲಿನ ಫ್ಲೈಓವರ್ ನಲ್ಲಿ ಪ್ರವಹಿಸುತ್ತಿರುವ ವಿದ್ಯುತ್ !
ಇವರ ಸ್ಕೂಟರ್ ಮುದಲಪ್ಪಾರ ಎಂಬಲ್ಲಿ ತಲುಪಿದಾಗ ಕಾಡು ಹಂದಿಗಳ ಹಿಂಡು ಏಕಾಏಕಿ ರಸ್ತೆಗೆ ನುಗ್ಗಿಬಂದಿದ್ದು, ಇವರಿಬ್ಬರ ಮೇಲೆ ಎರಗಿದೆ ಎಂದು ತಿಳಿದುಬಂದಿದೆ.
ಗಂಭೀರ ಗಾಯಗೊಂಡ ಇಬ್ಬರನ್ನು ಕಾಸರಗೋಡು ಖಾಸಗಿ ಆಸ್ಪತ್ರೆ ಗೆ ದಾಖಲಿಸಲಾಗಿದೆ.
Next Story