ಹೈಕೋರ್ಟ್‍ಗೆ ಆ.31ರವರೆಗೆ ರಜೆ
ಬೆಂಗಳೂರು, ಆ.28: ಹೈಕೋರ್ಟ್‍ನ ಬೆಂಗಳೂರಿನ ಪ್ರಧಾನ ಪೀಠ, ಧಾರವಾಡ ಹಾಗೂ ಕಲಬುರಗಿ ಪೀಠಗಳಿಗೆ ಆ.31ರವರೆಗೆ ರಜೆ ಇರಲಿದೆ. ಸ್ವರ್ಣ ಗೌರಿ ಮತ್ತು ಗಣೇಶ ಹಬ್ಬದ ಹಿಂದಿನ ದಿನವಾದ ಆ.29ರಂದು ಅಧಿಕೃತ ರಜೆ ಘೋಷಿಸಿರುವ ಹೈಕೋರ್ಟ್ ಅದಕ್ಕೆ ಬದಲಾಗಿ ಅ.15ರ ಶನಿವಾರ ಕಾರ್ಯನಿರ್ವಹಿಸಲು ನಿರ್ಧರಿಸಿದೆ.
ಆ.30ರಂದು ಗೌರಿ ಹಬ್ಬದ ಹಿನ್ನೆಲೆಯಲ್ಲಿ ಹೈಕೋರ್ಟ್ ಕ್ಯಾಲೆಂಡರ್ ಪ್ರಕಾರ ನಿರ್ಬಂಧಿತ ರಜೆ ಎಂದು ಹೇಳಲಾಗಿದೆ. ಆ.5ರಂದು ವರಮಹಾಲಕ್ಷ್ಮಿ ಹಬ್ಬ, ಆ.9ರಂದು ಮೊಹರಂ ಕೊನೆಯ ದಿನ ಹಾಗೂ ಆ.19ರಂದು ಶ್ರೀಕೃಷ್ಣ ಜನ್ಮಾಷ್ಟಮಿಯಂದು ಹೈಕೋರ್ಟ್‍ನಲ್ಲಿ ನಿರ್ಬಂದಿತ ರಜೆ ಘೋಷಿಸಲಾಗಿತ್ತು. ಈ ಮಧ್ಯೆ ಆ.15ರಂದು ಸ್ವಾತಂತ್ರ್ಯ ದಿನಾಚರಣೆ ಇದ್ದುದನು ನೆನೆಯಬಹುದಾಗಿದೆ. ಒಟ್ಟಾರೆಯಾಗಿ ಈ ತಿಂಗಳು 17 ದಿನ ಕಾರ್ಯನಿರ್ವಹಿಸಿದಂತಾಗಿದೆ.
ಪ್ರತಿಕೂಲ ಆದೇಶ ಮಾಡಬೇಡಿ: ಜಿಲ್ಲಾ ಕೋರ್ಟ್‍ಗಳಲ್ಲಿ ವರ್ಗಾವಣೀಯ ಲಿಖಿತಗಳ ಅಧಿನಿಯಮದ ಅಡಿ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ದಿನಾಂಕವನ್ನು ನಿಗದಿಪಡಿಸಲಾಗಿರುತ್ತದೆ. ಅವುಗಳ ವಿಚಾರದಲ್ಲಿ ಸರಕಾರವು ಕ್ರಮಕೈಗೊಳ್ಳಬೇಕಾಗುತ್ತದೆ. ಹೀಗಾಗಿ, ಒಂದೊಮ್ಮೆ ಸಂಬಂಧಿತ ಪ್ರಕರಣದಲ್ಲಿ ವಕೀಲರು ನ್ಯಾಯಾಲಯಕ್ಕೆ ಹಾಜರಾಗದಿದ್ದರೂ ಪ್ರತಿಕೂಲ ಆದೇಶ ಮಾಡದಂತೆ ಹೈಕೋರ್ಟ್ ಸೂಚನೆ ನೀಡಿದೆ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ತಿಳಿಸಿದ್ದಾರೆ.