ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾಕ್ಕೆ ಅನುಮತಿ ನಿರಾಕರಣೆ: ಸುತ್ತಮುತ್ತ ಪೊಲೀಸ್ ಭದ್ರತೆ
ಮೈಸೂರು,ಸೆ.24: ಚಾಮುಂಡಿಬೆಟ್ಟದ ಮಹಿಷ ಪ್ರತಿಮೆ ಬಳಿ ಮಹಿಷ ದಸರಾ ಆಚರಣೆಗೆ ಪೊಲೀಸರು ಅನುಮತಿಯನ್ನು ನಿರಾಕರಿಸಿದ್ದಾರೆ.
ಮಹಿಷ ಪ್ರತಿಮೆಯ ಸುತ್ತಲಿನ ಜಾಗದಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದು, ಕಾವಲಿಗೆ ನಿಂತಿದ್ದಾರೆ. ಮಹಿಷ ಪ್ರತಿಮೆಗೆ ಮಾಲಾರ್ಪಣೆ ಸೇರಿದಂತೆ ಪುಷ್ಪಾರ್ಚನೆ ಗೈಯ್ಯಲು ತೆರಳಬಹುದೆಂಬ ಕಾರಣಕ್ಕೆ ಮಹಿಷ ಪ್ರತಿಮೆಯನ್ನು ಬಟ್ಟೆಯಿಂದ ಮುಚ್ಚಲಾಗಿದೆ.
ಬೆಟ್ಟಕ್ಕೆ ತೆರಳುವ ವಾಹನಗಳನ್ನು ಈಗಾಗಲೇ ಪ್ರವೇಶಕ್ಕೆ ಮುನ್ನ ಸಂಪೂರ್ಣತಪಾಸಣೆ ನಡೆಸಿಯೇ ಬಿಡಲಾಗುತ್ತಿದ್ದು, ಹೆಚ್ಚಿನ ಪೊಲೀಸ್ ಭದ್ರತೆಯನ್ನು ಚಾಮುಂಡಿಬೆಟ್ಟದಲ್ಲಿ ನಿಯೋಜಿಸಲಾಗಿದೆ .
ನಗರದ ಅಶೋಕಪುರಂ ನಲ್ಲಿ ಮಹಿಷ ದಸರಾ ಆಚರಣೆ: ಲೇಖಕ ಸಿದ್ಧಸ್ವಾಮಿ
ಉದ್ದೇಶ ಪೂರ್ವಕದಿಂದಲೇ ಚಾಮುಂಡಿ ಬೆಟ್ಟದ ಮಹಿಷ ಮೂರ್ತಿ ಬಳಿ ಮಹಿಷ ದಸರಾಆಚರಣೆಗೆ ಅವಕಾಶ ನೀಡದೆ ಮೂಲ ನಿವಾಸಿಗಳ ಆಚರಣೆಗೆ ಧಕ್ಕೆಯುಂಟು ಮಾಡಲಾಗುತ್ತಿದೆ. ಆದರೂ ನಾವು ಇದಕ್ಕೆಲ್ಲಾ ಬಗ್ಗದೆ ಮೈಸೂರು ನಗರದ ಅಶೋಕಪುಂನ ಅಂಬೇಡ್ಕರ್ ಪಾರ್ಕ್ ನಲ್ಲಿ ಮಹಿಷ ದಸರಾ ಆಚರಣೆ ಮಾಡಿಯೇ ಮಾಡುತ್ತೇವೆ ಎಂದು ಮಹಿಷ ದಸರಾ ಆಚರಣಾ ಸಮಿತಿಅಧ್ಯಕ್ಷ ಲೇಖಕ ಸಿದ್ಧಸ್ವಾಮಿ ತಿಳಿಸಿದ್ದಾರೆ.
'ಕಳೆದ ಎಂಟು ವರ್ಷಗಳಿಂದ ಚಾಮುಂಡಿ ಬೆಟ್ಟದ ಮಹಿಷ ಮೂರ್ತಿ ಬಳಿಯೇ ನಾಡಿನ ಸಾಹಿತಿಗಳು, ಬುದ್ಧಿಜೀವಿಗಳು ಸೇರಿದಂತೆ ಮೂಲನಿವಾಸಿಗಳು ಅದ್ದೂರಿದಸರಾಆಚರಣೆ ಮಾಡುತ್ತಿದ್ದೆವು.ಆದರೆ ಬಿಜೆಪಿ ಸರ್ಕಾರಅಧಿಕಾರಕ್ಕೆ ಬಂದಾಗಿನಿಂದಉದ್ದೇಶ ಪೂರ್ವಕವಾಗಿಯೇ ಮೂಲ ನಿವಾಸಿಗಳ ಆಚರಣೆಗೆ ಧಕ್ಕೆಯುಂಟು ಮಾಡುತ್ತಿದೆ' ಎಂದು ಹೇಳಿದ್ದಾರೆ.