ಕೆಎಸ್ಸಾರ್ಟಿಸಿ ಸಿಬ್ಬಂದಿಗೆ ತಿಂಗಳ ಮೊದಲ ದಿನವೇ ವೇತನ
ಬೆಂಗಳೂರು, ಅ. 1: ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ)ಯ ಆರವತ್ತೈದು ವರ್ಷಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸಂಸ್ಥೆಯ ಚಾಲಕರು, ನಿರ್ವಾಹಕರು ಹಾಗೂ ತಾಂತ್ರಿಕ ಸಿಬ್ಬಂದಿ ಸೇರಿದಂತೆ ನಿಗಮದ 36 ಸಾವಿರ ಸಿಬ್ಬಂದಿಗೆ ತಿಂಗಳ ಒಂದನೇ ತಾರೀಕು ವೇತನ ಪಾತಿಸಲಾಗಿದೆ' ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ತಿಳಿಸಿದ್ದಾರೆ.
‘1957ರ ಮೈಸೂರು ಸರಕಾರ ರಸ್ತೆ ಸಾರಿಗೆ ಇಲಾಖೆಅಂದಿನಿಂದ ಇಲ್ಲಿಯವರೆಗೂ ಚಾಲಕ, ನಿರ್ವಾಹಕ ಹಾಗೂ ಸಾರಿಗೆ ಸಿಬ್ಬಂದಿಗಳಿಗೆ ತಿಂಗಳ 7ನೆ ತಾರೀಖಿನಂದು, ತಾಂತ್ರಿಕ ಸಿಬ್ಬಂದಿಗಳಿಗೆ 4ನೆ ತಾರೀಖಿನಂದು ಹಾಗೂ ಅಧಿಕಾರಿಗಳು ಹಾಗೂ ಆಡಳಿತ ಸಿಬ್ಬಂದಿಗಳಿಗೆ ತಿಂಗಳ ಒಂದನೇ ತಾರೀಖಿನಂದು ವೇತನ ಪಾವತಿ ಮಾಡಲಾಗುತ್ತಿತ್ತು' ಎಂದು ತಿಳಿಸಲಾಗಿದೆ.
Next Story