ಬುಲ್ಬುಲ್ ಹಕ್ಕಿ ಮೇಲೆ ಸಾವರ್ಕರ್ ಸವಾರಿ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಬೆಂಗಳೂರು, ನ. 25: ವಿನಾಯಕ ದಾಮೋದರ ಸಾವರ್ಕರ್ ಬುಲ್‍ಬುಲ್ ಹಕ್ಕಿಗಳ ಮೇಲೆ ಕುಳಿತು ತೆರಳಿದ್ದರು ಎನ್ನುವ ವಿಚಾರಕ್ಕೆ ಹೈಕೋರ್ಟ್‍ನಲ್ಲಿ ಕರ್ನಾಟಕ ಅನುದಾನ ರಹಿತ ಶಾಲೆಗಳ ನಿರ್ವಹಣೆಗಳ ಸಂಘ (ಕುಸ್ಮಾ) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠ ಕರ್ನಾಟಕ ಶಿಕ್ಷಣ ಕಾಯ್ದೆ-1983ರ ವಿವಿಧ ನಿಬಂಧನೆಗಳನ್ನು ಖಾಸಗಿ ಅನುದಾನರಹಿತ ಶಾಲೆಗಳಿಗೂ ಅಳವಡಿಕೆ ಮಾಡಿರುವುದು ಅಸಮಂಜಸ ಮತ್ತು ಅಸಾಂವಿಧಾನಿಕ ಎಂದು ಆಕ್ಷೇಪಿಸಲಾದ ತಿದ್ದುಪಡಿ ಅರ್ಜಿಯ ವಿಚಾರಣೆ ನಡೆಸಿತು.
ಇದನ್ನೂ ಓದಿ: ಶಾಸಕ ಟಿ.ಡಿ.ರಾಜೇಗೌಡ ವಿರುದ್ದ ಅಕ್ರಮ ಆಸ್ತಿ ಖರೀದಿ ಆರೋಪ: 'ಕೆಫೆ ಕಾಫಿ ಡೇ' ಮಾಳವಿಕಾ ಹೆಗ್ಡೆ ಸ್ಪಷ್ಟನೆ ಏನು?
ವಿಚಾರಣೆ ವೇಳೆ ಅರ್ಜಿದಾರರ ಪರವಾದ ಮಂಡಿಸಿದ ವಕೀಲ ಕೆ.ವಿ.ಧನಂಜಯ ಅವರು, ನಿಗದಿಪಡಿಸಿದ ಪಠ್ಯಕ್ರಮಕ್ಕಿಂತ ಹೆಚ್ಚೇನೂ ಮಕ್ಕಳಿಗೆ ಕಲಿಸಬಾರದು ಎಂದು ನಿರ್ದೇಶಿಸುವ ನಿಬಂಧನೆಗಳಿಗೆ ಈ ಅಳವಡಿಕೆ ವಿರುದ್ಧವಾಗಿವೆ. ಅದರಲ್ಲೂ, ಪಠ್ಯಕ್ರಮದಲ್ಲಿ ಅಳವಡಿಸಲಾಗಿರುವ ಸಾವರ್ಕರ್ ಬಗೆಗಿನ ಕೆಲ ಸಾಲುಗಳು ಮತ್ತು 1984ರ ದಿಲ್ಲಿ ಸಿಖ್ ಹತ್ಯಾಕಾಂಡದ ಕುರಿತ ಮಾಹಿತಿ ಪ್ರಮುಖವಾದದ್ದು ಎಂದು ತಿಳಿಸಿದರು.
ಇಂತಹ ತಪ್ಪುಗಳನ್ನು ಎತ್ತಿ ತೋರಿಸುವ ಅಧಿಕಾರ ಕುಸ್ಮಾಗೆ ಇದೆ. ಇನ್ನೂ, ಮುಕ್ತ ಮಾರುಕಟ್ಟೆಯು ಸರಕಾರದ ಪ್ರಕಟಣೆಗಳಿಗಿಂತ ಹೆಚ್ಚು ಮಕ್ಕಳ ಸ್ನೇಹಿಯಾಗಿದೆ ಎಂದು ಅವರು ಉಲ್ಲೇಖಿಸಿದರು. ಇನ್ನೂ, ವಾದವನ್ನು ಆಲಿಸಿದ ಹೈಕೋರ್ಟ್‍ನ ವಿಭಾಗೀಯ ನ್ಯಾಯಪೀಠ ತೀರ್ಪು ಅನ್ನು ಕಾಯ್ದಿರಿಸಿದೆ.