ಮಹಾರಾಷ್ಟ್ರದಲ್ಲಿ ಮತ್ತೆ ಕರ್ನಾಟಕ ಸಾರಿಗೆ ಬಸ್ ಮೇಲೆ ಕಲ್ಲು ತೂರಾಟ
ಬೆಳಗಾವಿ,ನ.26: ಮಹಾರಾಷ್ಟ್ರದಲ್ಲಿ ಕರ್ನಾಟಕ ಸಾರಿಗೆ ಬಸ್ ಮೇಲೆ ಶುಕ್ರವಾರ ರಾತ್ರಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ವರದಿಯಾಗಿದೆ.
ಪುಣೆಯಿಂದ ಹೊರಟಿದ್ದ ಕರ್ನಾಟಕ ಬಸ್ ಗೆ ಮೀರಜ್ -ಕಾಗವಾಡ ಮಾರ್ಗಮಧ್ಯೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆನ್ನಲಾಗಿದ್ದು, ಬಸ್ ಮುಂಭಾಗದ ಗಾಜು ಜಖಂಗೊಂಡಿದೆ.
ಬೆಳಗಾವಿಯ ಅಥಣಿ ಡಿಪೋಗೆ ಸೇರಿದ ಬಸ್, ಪುಣೆಯಿಂದ ಅಥಣಿಗೆ ಬರುತಿದ್ದ ವೇಳೆ ಕೃತ್ಯ ನಡೆದಿದೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾ ಪೋಲೀಸರ ಸೂಚನೆ ಮೇರೆಗೆ ಅಥಣಿ-ಮಿರಜ್ ನಡುವಿನ ಬಸ್ ಸಂಚಾರವನ್ನ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಮಹಾಷ್ಟ್ರ ಸರ್ಕಾರದ ಜತೆ ಮಾತುಕತೆ: ''ನಾನು ಈಗಾಗಲೇ ಮಹಾಷ್ಟ್ರ ಸರ್ಕಾರದ ಜತೆ ಮಾತಾಡಿದ್ದೇನೆ, ನಮ್ಮ ಬಸ್ ಗಳಿಗೆ ಯಾವುದೇ ಹಾನಿ ಮಾಡಬಾರದು ಅಂತ ತಿಳಿಸಿದ್ದೇವೆ. ಎರಡೂ ರಾಜ್ಯಗಳ ನಡುವೆ ಶಾಂತಿ ಸೌಹಾರ್ದತೆ ಕಾಪಾಡಲು ಹೇಳಿದ್ದೇವೆ'' ಎಂದು ಬಸ್ ಗಳಿಗೆ ಕಲ್ಲು ತೂರಾಟ ನಡೆದಿರುವ ವಿಚಾರದ ಬಗ್ಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಗುಜರಾತ್ ಚುನಾವಣೆ ಬಳಿಕ ಸಚಿವ ಸಂಪುಟ ವಿಸ್ತರಣೆ: ಸಿಎಂ ಬೊಮ್ಮಾಯಿ