ಮುಂಬೈ: ಖ್ಯಾತ ಉದ್ಯಮಿ ಪಾರಸ್ ಪೊರ್ವಾಲ್ 23ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ
ಪಾರಸ್ ಪೊರ್ವಾಲ್ (Photo: Twitter/@RahulDeoKumar)
ಮುಂಬೈ: ನಗರದ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಬಿಲ್ಡರ್ ಪಾರಸ್ ಪೊರ್ವಾಲ್ (Paras Porwal) ಅವರು ಮುಂಬೈ (Mumbai) ನಗರದ ಶಾಂತಿ ಕಮಲ್ ಹೌಸಿಂಗ್ ಸೊಸೈಟಿಯಲ್ಲಿನ 23ನೇ ಅಂತಸ್ತಿನಲ್ಲಿರುವ ತಮ್ಮ ನಿವಾಸದ ಜಿಮ್‍ನ ಬಾಲ್ಕನಿಯಿಂದ ಕೆಳಕ್ಕೆ ಜಿಗಿದು ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಐವತ್ತೇಳು ವರ್ಷದ ಪಾರಸ್ ಅವರು ಬರೆದಿದ್ದಾರೆನ್ನಲಾದ ಸುಸೈಡ್ ನೋಟ್ ಅವರ ಜಿಮ್‍ನಲ್ಲಿ ಪತ್ತೆಯಾಗಿದೆ. ತಮ್ಮ ಸಾವಿಗೆ ಯಾರೂ ಕಾರಣರಲ್ಲ, ಈ ಕುರಿತು ಯಾವುದೇ ತನಿಖೆ ನಡೆಸಬಾರದು ಎಂದು ಅದರಲ್ಲಿ ಬರೆದಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಇಂದು ಬೆಳಿಗ್ಗೆ 6 ಗಂಟೆಗೆ ನಡೆದಿದೆ.
ದಾರಿಹೋಕರೊಬ್ಬರು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕಾಗಮಿಸಿದಾಗ ಮೃತಪಟ್ಟವರು ಪಾರಸ್ ಎಂದು ತಿಳಿದು ಬಂದಿತ್ತು ಎಂದು ವರದಿಯಾಗಿದೆ.
ಆತ್ಮಹತ್ಯೆಗೆ ನಿಖರ ಕಾರಣವೇನೆಂದು ತಿಳಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: "ಮುಸ್ಲಿಮರು ಲಕ್ಷ್ಮಿದೇವಿಯನ್ನು ಪೂಜಿಸುವುದಿಲ್ಲ, ಅವರು ಶ್ರೀಮಂತರಲ್ಲವೇ?": BJP ಶಾಸಕ
Next Story